thumbnail

Massive fire: ಮುಂಬೈನ ಐದು ಅಂತಸ್ತಿನ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ - ವಿಡಿಯೋ

By

Published : Jun 9, 2023, 9:02 AM IST

Updated : Jun 9, 2023, 9:35 AM IST

ಮುಂಬೈ : ಇಲ್ಲಿನ ಝವೇರಿ ಬಜಾರ್ ಪ್ರದೇಶದಲ್ಲಿರುವ ಐದು ಅಂತಸ್ತಿನ ಕಟ್ಟಡದಲ್ಲಿ ನಿನ್ನೆ ತಡರಾತ್ರಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ 12ಕ್ಕೂ ಹೆಚ್ಚು ಅಗ್ನಿಶಾಮಕ ದಳದ ವಾಹನಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಸದ್ಯಕ್ಕೆ ಬೆಂಕಿ ನಿಯಂತ್ರಣದಲ್ಲಿದೆ. ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.  

ಇದನ್ನೂ ಓದಿ : ಚಾಮುಂಡಿ ಬೆಟ್ಟ ತಪ್ಪಲಿನ ಶಾಮಿಯಾನ ಗೋದಾಮಿನಲ್ಲಿ ಬೆಂಕಿ - ವಿಡಿಯೋ

ಮುಂಬೈನ ಝವೇರಿ ಬಜಾರ್‌ನ 5ನೇ ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಕಟ್ಟಡದಲ್ಲಿ ಸಿಲುಕಿದ್ದ 50 ರಿಂದ 60 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ, ಯಾವುದೇ ಪ್ರಾಣಹಾನಿ ಸಂಭವಿಸಿರುವ ಕುರಿತು ವರದಿಯಾಗಿಲ್ಲ. ಸದ್ಯಕ್ಕೆ ಬೆಂಕಿಯನ್ನು ಹತೋಟಿಗೆ ತರಲಾಗಿದ್ದು, ಬೆಂಕಿಯ ರಭಸಕ್ಕೆ ಕಟ್ಟಡದ ಮೆಟ್ಟಿಲು ಹಾಗೂ ಒಂದು ಬದಿ ಸಂಪೂರ್ಣ ಕುಸಿದಿದೆ.

ಇದನ್ನೂ ಓದಿ : Fire in Train : ಒಡಿಶಾದ ದುರ್ಗ್ - ಪುರಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ - ಆತಂಕಗೊಂಡು ಟ್ರೈನ್​ನಿಂದ ಇಳಿದು ಹೊರಬಂದ ಪ್ರಯಾಣಿಕರು

Last Updated : Jun 9, 2023, 9:35 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.