Uttarakhand avalanche: ಕೇದಾರನಾಥ ದೇವಾಲಯದ ಸುತ್ತ ಹಿಮಕುಸಿತ.. ವಿಡಿಯೋ - ಹಿಮಕುಸಿತ ವಿಡಿಯೋ
🎬 Watch Now: Feature Video
ಕೇದಾರನಾಥ ಉತ್ತರಾಖಂಡ : ಇಂದು ಮುಂಜಾನೆ ಕೇದಾರನಾಥ ದೇವಾಲಯದ ಸುತ್ತಲಿನ ಪರ್ವತಗಳ ಮೇಲೆ ಭಾರಿ ಹಿಮಕುಸಿತ ಸಂಭವಿಸಿದೆ. ಹಿಮಕುಸಿತದಿಂದ ಪರ್ವತಗಳ ಕೆಳಗೆ ಹಿಮದ ಹೊಗೆ ಎದ್ದಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇನ್ನು ಹಿಮಕುಸಿತವನ್ನು ಕೇದಾರನಾಥ ದೇವಾಲಯಕ್ಕೆ ಬಂದಿರುವ ಯಾತ್ರಾರ್ಥಿಗಳು, ಸಂದರ್ಶಕರು ಬೆರಗಾಗುವಂತೆ ನಿಂತು ನೋಡುತ್ತಿದ್ದರು. ಈ ಹಿಂದೆ ಜೂನ್ 4 ರಂದು, ಹೇಮಕುಂಡ್ ಸಾಹಿಬ್‌ಗೆ ಹೋಗುವ ಮಾರ್ಗದಲ್ಲಿ ಯಾತ್ರಾರ್ಥಿಗಳ ಗುಂಪಿಗೆ ಅಪ್ಪಳಿಸಿದ ಇದೇ ರೀತಿಯ ಹಿಮ ಹಿಮಪಾತವು ರಾಜ್ಯದಲ್ಲಿ ಸಂಭವಿಸಿತು. ಜೂನ್ 5 ರಂದು ರಕ್ಷಣಾ ಕಾರ್ಯಾಚರಣೆ ಪುನಾರಂಭಗೊಂಡ ನಂತರ ರಾಜ್ಯ ವಿಪತ್ತು ಪರಿಹಾರ ಪಡೆ (ಎಸ್‌ಡಿಆರ್‌ಎಫ್) ಯಾತ್ರಾರ್ಥಿಗಳಲ್ಲಿ ಐವರನ್ನು ರಕ್ಷಿಸಿತ್ತು.
ಹಿಮಪಾತದ ಕಾರಣ ಕೇದಾರನಾಥ ಧಾಮ ಯಾತ್ರೆಗೆ ಆಫ್‌ಲೈನ್ ನೋಂದಣಿಯನ್ನು ಜೂನ್ 10 ರವರೆಗೆ ಮತ್ತು ಆನ್‌ಲೈನ್ ನೋಂದಣಿ ಜೂನ್ 15 ರವರೆಗೆ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ನೋಂದಣಿ ಮಾಡಿಕೊಂಡಿರುವ ಭಕ್ತರು ಧಾಮಕ್ಕೆ ಭೇಟಿ ನೀಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದುವರೆಗೆ 41 ಲಕ್ಷಕ್ಕೂ ಅಧಿಕ ಭಕ್ತರು ಚಾರ್‌ಧಾಮ್ ಯಾತ್ರೆಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ. ಜನಸಂದಣಿ ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: Massive fire: ಮುಂಬೈನ ಐದು ಅಂತಸ್ತಿನ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ - ವಿಡಿಯೋ