ಬೆಣ್ಣೆ ಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿ ಹೋದ ವ್ಯಕ್ತಿ, ಇನ್ನೋರ್ವ ಬಚಾವ್.. ವಿಡಿಯೋ - man wash away in rain water

🎬 Watch Now: Feature Video

thumbnail

By

Published : Sep 2, 2022, 4:37 PM IST

Updated : Feb 3, 2023, 8:27 PM IST

ಧಾರವಾಡ: ಬೆಣ್ಣೆ ಹಳ್ಳದಲ್ಲಿ ಬೈಕ್ ಸಮೇತ ಓರ್ವ ಕೊಚ್ಚಿ ಹೋಗಿದ್ದಾನೆ. ಮತ್ತೋರ್ವ ಅಪಾಯದಿಂದ ಪಾರಾಗಿರುವ ಘಟನೆ ನವಲಗುಂದ ತಾಲೂಕಿನ ತಡಹಾಳ ಗ್ರಾಮದಲ್ಲಿ ನಡೆದಿದೆ. ನರಗುಂದಕ್ಕೆ ಹೊರಟ್ಟಿದ್ದ ವೇಳೆ ತಡಹಾಳ ಗ್ರಾಮದ ಹೊರ ವಲಯದಲ್ಲಿರುವ ಬೆಣ್ಣೆ ಹಳ್ಳ ದಾಟುವ ವೇಳೆ ಈ ಘಟನೆ ಸಂಭವಿಸಿದೆ. ತಡಹಾಳ ಗ್ರಾಮದ ಸದಾನಂದ ಪೂಜಾರ(35) ಕೊಚ್ಚಿ ಹೊದ ವ್ಯಕ್ತಿ. ಶರಣಯ್ಯ ಹಿರೇಮಠ ವ್ಯಕ್ತಿ ಪಾರಾದವರು. ರಕ್ಷಣೆ ಮಾಡುತ್ತಿದ್ದ ಗ್ರಾಮಸ್ಥರ ಕಣ್ಣೆದುರೇ ಸದಾನಂದ ಕೊಚ್ಚಿ ಹೋಗಿದ್ದಾರೆ. ಸ್ಥಳಕ್ಕೆ ಎನ್​​ಡಿಆರ್​​ಎಫ್ ತಂಡ ಆಗಮಿಸಿ ರಕ್ಷಣಾ ಕಾರ್ಯ ಮುಂದುವರೆಸಿದೆ. ನವಲಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Last Updated : Feb 3, 2023, 8:27 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.