ತಿರುವಿನಲ್ಲಿ ಸೋಲಾರ್ ಪ್ಲೇಟ್ ತುಂಬಿದ್ಧ ಲಾರಿ ಪಲ್ಟಿ: ಚಾಲಕ, ಕ್ಲೀನರ್ ಜಸ್ಟ್ ಮಿಸ್
🎬 Watch Now: Feature Video
ಚಾಮರಾಜನಗರ: ತಿರುವಿನಲ್ಲಿ ಲೋಡ್ ತುಂಬಿದ್ದ ಲಾರಿಯೊಂದು ಪಲ್ಟಿಯಾಗಿ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾದ ಘಟನೆ ಚಾಮರಾಜನಗರದ ಎಂಡಿ ಲಾಡ್ಜ್ ಬಳಿ ನಡೆದಿದೆ. ಹರಿಯಾಣ ಮೂಲದ ಲಾರಿ ಇದಾಗಿದ್ದು, ಸೋಲಾರ್ ಪ್ಲೇಟ್ಸ್ಗಳನ್ನು ತುಂಬಿಕೊಂಡು ತಮಿಳುನಾಡಿಗೆ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ತಿರುವಿನಲ್ಲಿ ಲಾರಿ ಪಲ್ಟಿಯಾಗಿದೆ. ಚಾಲಕ ಹಾಗೂ ಕ್ಲೀನರ್ ಹೊರಕ್ಕೆ ಜಿಗಿದು ಅಪಾಯದಿಂದ ಪಾರಾಗಿದ್ದಾರೆ. ಪಲ್ಟಿಯಾಗಿದ್ದ ಲಾರಿಯನ್ನು ನೋಡಲು ಜನರು ಜಾತ್ರೆಯಂತೆ ಸೇರಿದ್ದರು. ಪರಿಣಾಮ ಒಂದೂವರೆ ತಾಸಿಗೂ ಅಧಿಕ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.
ಏಕಾಏಕಿ ಪಲ್ಟಿ ಹೊಡೆದ ಟ್ರಕ್ : ಹಿಮಾಚಲ ಪ್ರದೇಶದಲ್ಲಿ ಭೀಕರ ಟ್ರಕ್ ಪಲ್ಟಿಯಾಗಿರುವ ಘಟನೆ ನಡೆದಿತ್ತು. ಸೇಬು ತುಂಬಿದ್ದ ಲಾರಿಯು ನಿಯಂತ್ರಣ ಕಳೆದುಕೊಂಡಿದ್ದರಿಂದ ಬರುತ್ತಿದ್ದಂತೆಯೆ ಶಿಮ್ಲಾದ ಥಿಯೋಗ್ನಲ್ಲಿ ಪಕ್ಕಕ್ಕೆ ಚಲಿಸುತ್ತಿದ್ದ 3 ಕಾರುಗಳು ಮತ್ತು ಬೈಕ್ ಮೇಲೆ ಬಂದು ಬಿದ್ದಿತ್ತು. ಪಲ್ಟಿ ಹೊಡೆದ ಪರಿಣಾಮ ಮಾರುತಿ ಕಾರಿನಲ್ಲಿ ಸಂಚರಿಸುತ್ತಿದ್ದ ದಂಪತಿಗಳು ಸಾವನ್ನಪ್ಪಿದ್ದರು. ಅಪಘಾತದ ವಿಡಿಯೋ ಕೂಡ ಲೈವ್ ಆಗಿ ಸೆರೆಯಾಗಿತ್ತು. ಘಟನೆ ಜರುಗಿದ ಒಂದು ಗಂಟೆಯ ಬಳಿಕ 2 ಜೆಸಿಬಿ ಯಂತ್ರಗಳ ಸಹಾಯದಿಂದ ಟ್ರಕ್ ಅನ್ನು ರಸ್ತೆ ಮೇಲಿಂದ ತೆರವುಗೊಳಿಸಲಾಗಿತ್ತು.
ಇದನ್ನೂ ಓದಿ: Video: ರಸ್ತೆಯ ಮೇಲೆ ಟ್ರಕ್ ಪಲ್ಟಿ: ದಂಪತಿ ಸಾವು - ಮೂರು ಕಾರು, ಒಂದು ಬೈಕ್ ಜಖಂ