ಮಟ್ಕಾ ದಂಧೆಗೆ ಕಡಿವಾಣ ಹಾಕಿದ ಐಪಿಎಸ್ ಅಧಿಕಾರಿಗೆ ಅದ್ಧೂರಿ ಸ್ವಾಗತ - ಐಪಿಎಸ್ ಅಧಿಕಾರಿ ಚಂದ್ರಶೇಕರ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17428032-thumbnail-3x2-lek.jpg)
ತುಮಕೂರು: ಮಟ್ಕಾ ದಂಧೆಗೆ ಕಡಿವಾಣ ಹಾಕಿದ ಐಪಿಎಸ್ ಅಧಿಕಾರಿಗೆ ಪಾವಗಡದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಪಾವಗಡ ತಾಲೂಕಿನ ದೊಡ್ಡಹಳ್ಳಿ ಗ್ರಾಮದ ಅಳಿಯನಾಗಿರುವ ಚಂದ್ರಶೇಖರ್ ಅವರಿಗೆ ಬೃಹತ್ ಗಾತ್ರದ ಹಾರ ಹಾಕಿ ನಗರದಲ್ಲಿ ಮೆರವಣಿಗೆ ಮಾಡಲಾಯಿತು. ಕೇಂದ್ರ ವಲಯ ಐಜಿಪಿಯಾಗಿದ್ದ ಚಂದ್ರಶೇಖರ್, ಪಾವಗಡ ತಾಲೂಕಿನಲ್ಲಿ ಮಟ್ಕಾ ದಂಧೆಗೆ ಸಂಪೂರ್ಣವಾಗಿ ಕಡಿವಾಣ ಹಾಕಿದ್ದರು. ಅಧಿಕಾರಿಯ ದಿಟ್ಟ ಕ್ರಮಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇಂದು ಅವರು ನಗರಕ್ಕೆ ಆಗಮಿಸಿದ್ದಾಗ ಪಾವಗಡ ನಾಗರಿಕ ವೇದಿಕೆ ಹಾಗೂ ಹಲವು ಸಂಘ ಸಂಸ್ಥೆಗಳು ಅದ್ಧೂರಿ ಸ್ವಾಗತ ಕೋರಿ ಅಭಿನಂದನೆ ಸಲ್ಲಿಸಿದರು.
Last Updated : Feb 3, 2023, 8:38 PM IST