ಜಮೀನು ವಿಷಯಕ್ಕೆ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ: ವಿಕಲಚೇತನ ವ್ಯಕ್ತಿ ಮೇಲೆ ಹಲ್ಲೆ - A fight between two families over land
🎬 Watch Now: Feature Video
ಹಾವೇರಿ: ಜಮೀನು ಒತ್ತುವರಿ ಹಿನ್ನೆಲೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮದಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಒಂದು ಕುಟುಂಬದ ವಿಕಲಚೇತನ ವ್ಯಕ್ತಿಗೆ ಇನ್ನೊಂದು ಕುಟುಂಬದ ಸದಸ್ಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಜಮೀನಿನಲ್ಲಿ ಉಳುಮೆ ಮಾಡುತ್ತಿರೋ ವೇಳೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ.
ಜಮೀನು ಪ್ರಕರಣ ನ್ಯಾಯಾಲಯದಲ್ಲಿದೆ. ಹಾಗಿರುವ ಸಂದರ್ಭ ಈ ಭೂಮಿಯಲ್ಲಿ ಉಳುಮೆ ಮಾಡಬೇಡಿ ಎಂದು ಒಂದು ಕುಟುಂಬದ ಸದಸ್ಯರು ಮನವಿ ಮಾಡಿದ್ದಾರೆ. ಉಳಿದ ಜಾಗದಲ್ಲಿ ಉಳುಮೆ ಮಾಡುವಂತೆ ವಿಕಲಚೇತನ ಗುಡ್ಡಪ್ಪ ಹೇಳಿದ್ದಕ್ಕೆ ಗುಡ್ಡಪ್ಪನ ಮೇಲೆ ಹಲ್ಲೆ ಮಾಡಲಾಗಿದೆ. ನೀಲಪ್ಪ ಎಂಬುವವರು ಪಕ್ಕದ ಜಮೀನು ಮಾಲೀಕ ಗುಡ್ಡಪ್ಪನ ಮೇಲೆ ಹಲ್ಲೆ ಮಾಡಿದ್ದಾರೆ. ಜಮೀನು ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿ ಗುಡ್ಡಪ್ಪ ಮತ್ತು ನೀಲಪ್ಪ ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪಿಂಚಣಿ ಪಡೆಯಲು ವೃದ್ಧೆಯನ್ನು ಕವಡಿಯಲ್ಲಿ ಕಚೇರಿಗೆ ಕರೆತಂದ ತಂದೆ, ಮಗ: ವಿಡಿಯೋ ವೈರಲ್