ಕಾರವಾರ: ಹತ್ತಡಿ ಉದ್ದದ ಕಾಳಿಂಗ ಸರ್ಪದೊಂದಿಗೆ ಕಾರಿನಲ್ಲಿ ಪ್ರಯಾಣಿಸಿದ ಕುಟುಂಬ!- ವಿಡಿಯೋ - etv bharat karnataka
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/18-10-2023/640-480-19799673-thumbnail-16x9-ck.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Oct 18, 2023, 7:24 PM IST
ಕಾರವಾರ: ನಾಲ್ವರು ಸದಸ್ಯರ ಕುಟುಂಬವೊಂದು ಕಾಳಿಂಗ ಸರ್ಪದೊಂದಿಗೆ ಕಾರಿನಲ್ಲಿ ಪ್ರಯಾಣಿಸಿದ್ದು, ಅಚ್ಚರಿ ರೀತಿಯಲ್ಲಿ ಅಪಾಯದಿಂದ ಪಾರಾಗಿರುವ ಘಟನೆ ಕಾರವಾರದ ಜೋಯಿಡಾದಲ್ಲಿ ನಡೆದಿದೆ. ರಾಮನಗರದಿಂದ ಕಾರಿನಲ್ಲಿ ಕುಟುಂಬಸ್ಥರು ಕುಂಬಾರವಾಡದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದಾರೆ. ಆಗ ಮನೆಯಲ್ಲಿದ್ದ ಬೆಕ್ಕು ವಿಚಿತ್ರವಾಗಿ ವರ್ತಿಸುತ್ತಾ ಕಾರನ್ನು ಸುತ್ತುವರಿಯುತ್ತಿತ್ತು. ಕುಟುಂಬಸ್ಥರು ಅಲ್ಲೇನಿರಬಹುದು ಎಂದು ಸಂಶಯದಿಂದ ಸಮೀಪ ತೆರಳಿ ನೋಡಿದ್ದಾರೆ.
ಈ ಸಂದರ್ಭದಲ್ಲಿ ಕಾರಿನ ಬಳಿ ಜೋರಾಗಿ ಹಾವು ಬುಸುಗುಡುವ ಶಬ್ದ ಕೇಳಿಸಿದೆ. ಕಾರಿನೊಳಗೆ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪ ಇರುವುದು ಗೊತ್ತಾಗಿದೆ. ಆತಂಕಕ್ಕೊಳಗಾದ ಕುಟುಂಬದವರು ತಕ್ಷಣವೇ ಸ್ಥಳೀಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಅರಣ್ಯ ಸಿಬ್ಬಂದಿ ಉರಗ ರಕ್ಷಕರನ್ನು ಕರೆಸಿದ್ದಾರೆ. ಸ್ಥಳಕ್ಕಾಗಮಿಸಿದ ಉರಗ ರಕ್ಷಕರು ಕಾರ್ಯಾಚರಣೆ ನಡೆಸಿ ಕಾಳಿಂಗ ಸರ್ಪವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ. ವಿಷಕಾರಿಯಾದ ಕಾಳಿಂಗ ಸರ್ಪದಿಂದ ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯವಾಗಿಲ್ಲ. ನಿಲ್ಲಿಸಿದ್ದ ಸಂದರ್ಭದಲ್ಲಿ ಕಾರು ಸೇರಿಕೊಂಡಿದ್ದ ಹಾವು ನಂತರ ಚಲನೆಯಲ್ಲಿರುವ ಕಾರಣ ಇಳಿದು ಹೋಗಲಾಗದೆ ಕಾರಿನಲ್ಲೇ ಸಿಲುಕಿಕೊಂಡಿರಬಹುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: ಮನೆಯ ರೆಫ್ರಿಜರೇಟರ್ನಲ್ಲಿ 5 ಅಡಿ ಉದ್ದದ ಱಟ್ ಸ್ನೇಕ್ ಪತ್ತೆ: ವಿಷರಹಿತ ಸರೀಸೃಪವನ್ನು ಹಿಡಿದು ಕಾಡಿಗೆ ಬಿಟ್ಟ ಉರಗರಕ್ಷಕ