ಅವಸರವೇ ಅಪಘಾತಕ್ಕೆ ಕಾರಣ.. ಕಾರು ಗುದ್ದಿದ ರಭಸಕ್ಕೆ ಡಿವೈಡರ್​ ಮೇಲೆ ತೂರಿ ಬಿದ್ದ ಯುವತಿ - ರಸ್ತೆ ದಾಟುವಾಗ ಯುವತಿಗೆ ಕಾರ್​ ಡಿಕ್ಕಿ

🎬 Watch Now: Feature Video

thumbnail

By

Published : Sep 21, 2022, 12:13 PM IST

Updated : Feb 3, 2023, 8:28 PM IST

ಬೆಂಗಳೂರು : ರಸ್ತೆ ದಾಟುವಾಗ ಯುವತಿಗೆ ಕಾರ್​ ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿ ನಡೆದಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ‌. ಇದೇ ತಿಂಗಳ 17 ರಂದು ಅಶ್ವಿನಿ ಎಂಬ ಯುವತಿ ಆತುರವಾಗಿ ರಸ್ತೆ ದಾಟುವಾಗ ಕಾರ್​ ಡಿಕ್ಕಿಯಾಗಿ ಡಿವೈಡರ್ ಮೇಲೆ ತೂರಿ ಬಿದ್ದಿದ್ದರು. ರಸ್ತೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಅಪಘಾತದ ದೃಶ್ಯ ಸೆರೆಯಾಗಿದ್ದು, ಸದ್ಯ ಗಾಯಗೊಂಡಿರುವ ಅಶ್ವಿನಿ ಅವರಿಗೆ ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತು ಆರ್.ಟಿ.ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Feb 3, 2023, 8:28 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.