ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್ಗೆ ಕಾರು ಡಿಕ್ಕಿ.. ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ - kannada top news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17314208-thumbnail-3x2-sa.jpg)
ಬೆಂಗಳೂರು: ಸಂಚಾರಿ ಪೊಲೀಸ್ ಕಾನ್ಸ್ಟೇಬಲ್ಗೆ ಕಾರು ಡಿಕ್ಕಿಯಾದ ಪರಿಣಾಮ ಕಾಲಿನ ಮೂಳೆ ಮುರಿದಿರುವ ಘಟನೆ ಬೈಯಪ್ಪನಹಳ್ಳಿಯ ಕಗ್ಗದಾಸನಪುರ ಬಳಿ ನಡೆದಿದೆ. ಇದೇ ತಿಂಗಳ 24ರಂದು ಈ ಘಟನೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂಚಾರ ನಿರ್ವಹಣೆಯ ಕರ್ತವ್ಯದಲ್ಲಿದ್ದಾಗ ಜೀವನ್ ಭೀಮಾನಗರ ಸಂಚಾರ ಠಾಣೆಯ ಕಾನ್ಸ್ಟೇಬಲ್ ರಮೇಶ್ಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಗಾಯಾಳು ರಮೇಶ್ ಅವರನ್ನು ಹಾಸ್ಮೆಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕನ ವಿರುದ್ಧ ಜೀವನ್ ಭೀಮಾನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Feb 3, 2023, 8:37 PM IST