ಅಹಮದಾಬಾದ್ನಿಂದ ಬೆಳಗಾವಿಗೆ ಆಗಮಿಸುತ್ತಿದ್ದ ಬಸ್‌ಗೆ ಬೆಂಕಿ - 16 ಪ್ರಯಾಣಿಕರು ಸುರಕ್ಷಿತ! - fire on Belgaum bus
🎬 Watch Now: Feature Video
Published : Oct 20, 2023, 7:37 AM IST
ಅಹಮದಾಬಾದ್ (ಗುಜರಾತ್): ಗುಜರಾತ್ನ ಅಹಮದಾಬಾದ್ನಿಂದ ರಾಜ್ಯದ ಬೆಳಗಾವಿಗೆ ತೆರಳುತ್ತಿದ್ದ ಬಸ್‌ಗೆ ಬೆಂಕಿ ತಗುಲಿದೆ. ಗುಜರಾತ್ನ ವಲ್ಸಾದ್ ಜಿಲ್ಲೆಯ ಪಾರ್ಡಿ ಗ್ರಾಮದ ಬಳಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಸ್‌ನಲ್ಲಿ 16 ಪ್ರಯಾಣಿಕರಿದ್ದರು. ಎಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಅಗ್ನಿ ಅವಘಡ ಹಿನ್ನೆಲೆ ಮುಂಬೈ - ಅಹಮದಾಬಾದ್ ಹೆದ್ದಾರಿ 2 ಗಂಟೆಗಳ ಕಾಲ ಬಂದ್ ಆಗಿತ್ತು. ಈ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಕೋರಮಂಗಲದಲ್ಲಿ ಅಗ್ನಿ ಅವಘಡ : ರೆಸ್ಟೋರೆಂಟ್ ಸುಟ್ಟು ಕರಕಲು.. ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದ ಯುವಕ
ಮತ್ತೊಂದು ಅಗ್ನಿ ದುರಂತ: ನಿನ್ನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ ದೊಡ್ಡ ಮಟ್ಟದ ಅಗ್ನಿ ಅವಘಡ ಸಂಭವಿಸಿತ್ತು. ಗುರುವಾರ ಬೆಳಗ್ಗೆ ಕೋರಮಂಗಲ ಸಮೀಪದ ಮಡ್ ಪೈಪ್ ರೆಸ್ಟೋರೆಂಟ್ನ ಅಡುಗೆ ಕೋಣೆಯಲ್ಲಿ ಅಗ್ನಿ ಕಾಣಿಸಿಕೊಂಡು, ಬಳಿಕ ಸಂಪೂರ್ಣ ರೆಸ್ಟೋರೆಂಟ್ ಸುಟ್ಟು ಕರಕಲಾಗಿದೆ. ನೋಡ ನೋಡುತ್ತಿದ್ದಂತೆ ಅಗ್ನಿ ಸಂಪೂರ್ಣ ಕೋಣೆ ಆವರಿಸಿ, ಕಟ್ಟಡದ ಮೇಲಂತಸ್ತು ಅಗ್ನಿಗಾಹುತಿ ಆಗಿದೆ. 8 ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯಿತು. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.