ತಂಜಾವೂರಿನಲ್ಲಿ ಸಾರಿ ವಾಕಥಾನ್: 2000 ಮಹಿಳೆಯರಿಂದ ಸೀರೆಯ ನಡಿಗೆ ಸ್ಪರ್ಧೆ
🎬 Watch Now: Feature Video
ತಂಜಾವೂರು(ತಮಿಳುನಾಡು): ಸಾಂಪ್ರದಾಯಿಕ ಉಡುಪುಗಳು ಫಿಟ್‌ನೆಸ್‌ಗೆ ಅಡ್ಡಿಯಾಗುವುದಿಲ್ಲ ಎಂಬ ಜಾಗೃತಿಗಾಗಿ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಇನ್ನರ್ ವೀಲ್ ಕ್ಲಬ್ ಶನಿವಾರ ತಂಜಾವೂರಿನಲ್ಲಿ ‘ಸಾರಿ ವಾಕಥಾನ್’ ಎಂಬ ಹೆಸರಿನಲ್ಲಿ ಸ್ಪರ್ಧೆಯನ್ನು ಆಯೋಜಿಸಿದೆ. ಈ ಸೀರೆ ನಡಿಗೆ ಸ್ಪರ್ಧೆಗೆ ಜಿಲ್ಲಾಧಿಕಾರಿ ದಿನೇಶ್ ಪೊನ್ರಾಜ್ ಆಲಿವರ್ ಅವರು ಚಾಲನೆ ನೀಡಿದ್ದಾರೆ. ಮೊದಲು 18 ರಿಂದ 35 ವರ್ಷ ವಯಸ್ಸಿನ ಮಹಿಳೆಯರನ್ನು ಮೂರು ವಿಭಾಗಗಳಾಗಿ ಮಾಡಿ ಸ್ಪರ್ಧೆಯನ್ನು ನಡೆಸಲಾಗುತ್ತದೆ. ಇವರು 4 ಕಿ.ಮೀ ವಾಕಿಂಗ್ ಮೂಲಕ ಕ್ರಮಿಸಬೇಕು. ಎರಡನೇ ಗುಂಪಿನಲ್ಲಿ 36 ರಿಂದ 59 ವರ್ಷ ವಯಸ್ಸಿನ ಮಹಿಳೆಯರು 3 ಕಿ.ಮೀ ಕ್ರಮಿಸಿದರೆ, ಹಿರಿಯ ನಾಗರಿಕರು ಶ್ರೀ ಬ್ರಹದೀಶ್ವರ ದೇವಸ್ಥಾನದ ಸಂಕೀರ್ಣದಿಂದ ಒಂದು ಕಿ.ಮೀ ದೂರದವರೆಗೆ ನಡೆದುಕೊಂಡು ಹೋಗಬೇಕು. ಒಟ್ಟಾರೆಯಲ್ಲಿ ಈ ಸಾರಿ ವಾಕಥಾನ್ ಯಶಸ್ವಿಯಾಗಿ ಭಾಗವಹಿಸಿದ್ದ ಮಹಿಳೆಯರಿಗೆ ಹೊಸದಾದ ಅನುಭವ ನೀಡಿದೆ.
ಇದನ್ನೂ ಓದಿ: ಮಹಾಶಿವರಾತ್ರಿ ವಿಶೇಷ.. ಮಧುರೈಗೆ ರಾಷ್ಟ್ರಪತಿ ಮುರ್ಮು ಆಗಮನ: ವಿಶೇಷ ಭದ್ರತೆ