ಬೋರ್‌ವೆಲ್‌ಗೆ ಬಿದ್ದ 2 ವರ್ಷದ ಬಾಲಕಿ: 2 ಗಂಟೆಗಳ ಕಾರ್ಯಾಚರಣೆ ಬಳಿಕ ಮಗು ರಕ್ಷಣೆ - ಎರಡು ಗಂಟೆಗಳ ಕಾಲ ಕಾರ್ಯಾಚರಣೆ
🎬 Watch Now: Feature Video
ಶಹಜಹಾನ್‌ಪುರ (ಉತ್ತರ ಪ್ರದೇಶ): ಆಟವಾಡುತ್ತಿದ್ದ ವೇಳೆ ಎರಡು ವರ್ಷದ ಬಾಲಕಿ 25 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದ ಘಟನೆ ಶಹಜಹಾನ್‌ಪುರ ಜಿಲ್ಲೆಯ ಜಿಲ್ಲೆಯ ನಿಗೋಹಿ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಸುಮಾರು ಎರಡು ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿ ಬಾಲಕಿಯನ್ನು ಬೋರ್ವೆಲ್ನಿಂದ ಹೊರತೆಗೆಯಲಾಗಿದೆ. ಮಾಹಿತಿ ಪಡೆದು ಸ್ಥಳಕ್ಕೆ ಆಗಿಮಿಸಿದ್ದ ಪೊಲೀಸರು, ಜೆಸಿಪಿ, ರಕ್ಷಣಾ ತಂಡವನ್ನು ಕರೆಸಿ ಸುಮಾರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿಗೋಹಿ ಪೊಲೀಸ್ ಠಾಣಾ ವ್ಯಾಪ್ತಿಯ ವಿರಾಸಿನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಭಿಷೇಕ್ ಹಾಗೂ ಶಾಲಿನಿ ದಂಪತಿಯ ಮಗು ಇದಾಗಿದ್ದು, ಇಂದು ಬೆಳಗ್ಗೆ ಸುಮಾರು 10 ಗಂಟೆ ಹೊತ್ತಿಗೆ ಹೊರಗಡೆ ಆಡುತ್ತಿದ್ದ ಮಗು ಇದ್ದಕ್ಕಿದ್ದಂತೆ ಕಾಣೆಯಾಗಿದ್ದಾಳೆ. ಎಲ್ಲಿದ್ದಾಳೆ ಎಂದು ಹುಡುಕಾಡುತ್ತಿದ್ದಾಗ ಮನೆಯ ಸ್ವಲ್ಪ ದೂರದಲ್ಲೇ ಇದ್ದ ಬೋರ್ವೆಲ್ ಒಳಗಿಂದ ಅಳುವ ಸದ್ದು ಕೇಳಿಸಿದೆ. ಬೋರ್ವೆಲ್ ಒಳಗೆ ಬಿದ್ದ ಮಗುವಿನ ಅಳು ಕೇಳಿ ಸ್ಥಳಕ್ಕೆ ಓಡಿ ಬಂದು ಸಂಬಂಧಿಕರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಕೂಡಲೇ ಜೆಸಿಬಿಯನ್ನೂ ಕರೆಯಿಸಿ, ಬೋರ್‌ವೆಲ್‌ಗೆ ಸಮನಾಗಿ ಮತ್ತೊಂದು ಹೊಂಡ ತೋಡಿದ್ದಾರೆ. ಇದಾದ ಬಳಿಕ ಬಾಲಕಿಯನ್ನು ಬಕೆಟ್‌ನಲ್ಲಿ ಸುರಕ್ಷಿತವಾಗಿ ಹೊರ ತೆಗೆಯಲಾಯಿತು. ಈ ಸಂಪೂರ್ಣ ರಕ್ಷಣಾ ಕಾರ್ಯಾಚರಣೆ ಸುಮಾರು 2 ಗಂಟೆಗಳ ಕಾಲ ನಡೆದಿದ್ದು, ಈ ವೇಳೆ ಮಗುವಿಗೆ ಆಮ್ಲಜನಕದ ಕೊರತೆ ಆಗಿತ್ತು. ಮಗುವಿನ ದೇಹದ ಮೇಲೂ ಗಾಯಗಳಾಗಿದ್ದರಿಂದ ತಕ್ಷಣ ಬಾಲಕಿಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು.
ಇದನ್ನೂ ನೋಡಿ: ಅರುಣಾಚಲ ಪ್ರದೇಶದಲ್ಲಿ ಭೂಕುಸಿತ: ಕೆಸರು ಮಣ್ಣಿನ ಜೊತೆ ಕೊಚ್ಚಿ ಹೋದ ಕಾರು.. ವಿಡಿಯೋ