ವಿದ್ಯುತ್ ತಂತಿ ಹರಿದು ಬಿದ್ದು 11 ಜಾನುವಾರುಗಳ ದುರ್ಮರಣ - ವಿಡಿಯೋ - ವಿದ್ಯುತ್ ತಂತಿ ಅಪಘಾತ

🎬 Watch Now: Feature Video

thumbnail

By

Published : May 30, 2023, 2:39 PM IST

ಕೊಪ್ಪಳ: ಭಾರಿ ಗಾಳಿ ಮಳೆಯಿಂದ ವಿದ್ಯುತ್ ತಂತಿ ಹರಿದು ಬಿದ್ದು 11 ಜಾನುವಾರುಗಳು ದುರ್ಮರಣ ಹೊಂದಿದ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಕಳ್ಳಮಳ್ಳಿ ತಾಂಡಾದಲ್ಲಿ ಮಂಗಳವಾರ ಜರುಗಿದೆ. ಈ ಘಟನೆಯಲ್ಲಿ 2 ಎತ್ತು, 7 ಆಕಳು ಹಾಗೂ 2 ಎಮ್ಮೆ ಸೇರಿ ಒಟ್ಟು 11 ಜಾನುವಾರುಗಳ ಸಾವಿಗೀಡಾಗಿವೆ. ಕಳಮಳ್ಳಿ ತಾಂಡಾದ ರಾಮಪ್ಪ ಪವಾರ್ ಎಂಬುವವರಿಗೆ ಸೇರಿದ 2 ಎತ್ತು ಹಾಗೂ 7 ಆಕಳು, ಭದ್ರಪ್ಪ ಪವಾರ್ ಎಂಬುವವರಿಗೆ ಸೇರಿದ 2 ಎಮ್ಮೆ ಸಾವನ್ನಪ್ಪಿವೆ. ಸ್ಥಳಕ್ಕೆ ತಾವರಗೇರಾ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. 

ವಿದ್ಯುತ್ ತಂತಿಗೆ ಸಿಲುಕಿ ಹಾರುವ ಬೆಕ್ಕು ಸಾವು: ಅಪರೂಪದಲ್ಲಿ ಅಪರೂಪವಾಗಿರುವ ಹಾರುವ ಬೆಕ್ಕು ಮರದಿಂದ ಮರಕ್ಕೆ ಜಿಗಿಯುವ ಸಂದರ್ಭದಲ್ಲಿ ವಿದ್ಯುತ್ ತಂತಿಗೆ ಸಿಲುಕಿ ಸಾವಿಗೀಡಾದ ಘಟನೆ ಶಿರಸಿ ನಗರದ ಟಿಎಸ್ಎಸ್ ರಸ್ತೆಯಲ್ಲಿ ನಡೆದಿತ್ತು. ಸುಮಾರು 10.15ಕ್ಕೆ ಘಟನೆ ನಡೆದಿದ್ದು, ಕೆಲಕಾಲ ವಿದ್ಯುತ್ ವ್ಯತ್ಯಯವೂ ಉಂಟಾಗಿತ್ತು.‌ ಕಾಡಿನಲ್ಲಿ ವಾಸಿಸುವ ಈ ಬೆಕ್ಕು ಸಾಮಾನ್ಯವಾಗಿ ಮರದ ಪೊಟರೆಗಳಲ್ಲಿ ವಾಸ ಮಾಡುತ್ತದೆ.

ಇದನ್ನೂ ಓದಿ: ರೀಲ್ಸ್ ಹುಚ್ಚಾಟಕ್ಕೆ ಇಬ್ಬರು ಮಹಿಳೆಯರು ಬಲಿ: ಹರಿಯಾಣದಲ್ಲಿ ಭೀಕರ ಹಿಟ್​ &​ ರನ್​ ಕೇಸ್

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.