ಕೃತಕ ಕಾವು ಪಡೆದು ಮೊಟ್ಟೆಗಳಿಂದ ಹೊರಬಂದ ಕೇರೆಹಾವಿನ ಮರಿಗಳು: ಸ್ನೇಕ್ ನಾಗೇಂದ್ರ ಕಾರ್ಯಕ್ಕೆ ಮೆಚ್ಚುಗೆ - ETV Bharat kannada
🎬 Watch Now: Feature Video
ಬೆಂಗಳೂರು ಉತ್ತರ ತಾಲೂಕಿನ ಕುದುರೆಗೆರೆ ಗ್ರಾಮದಲ್ಲಿ ಸ್ನೇಕ್ ನಾಗೇಂದ್ರ ಅವರು ಸುರಕ್ಷಿತವಾಗಿ ಸಂರಕ್ಷಣೆ ಮಾಡಿಟ್ಟಿದ್ದ 11 ಕೇರೆ ಹಾವಿನ ಮೊಟ್ಟೆಗಳಿಂದ ಮರಿಗಳು ಹೊರಬಂದಿವೆ. ಸುಮಾರು ಎರಡು ತಿಂಗಳ ಹಿಂದೆ ನಾಗೇಂದ್ರ ಅವರು ತೋಟವೊಂದರಲ್ಲಿ ಕೇರೆ ಹಾವನ್ನು ರಕ್ಷಣೆ ಮಾಡಿದ್ದರು. ರಕ್ಷಣೆ ಮಾಡಿದ್ದ ಮರುದಿನವೇ ಹಾವು 11 ಮೊಟ್ಟೆಗಳನ್ನು ಇಟ್ಟಿತ್ತು. ತಾಯಿ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟದ್ದರು. ನಂತರ 11 ಮೊಟ್ಟೆಗಳಿಗೆ ನಿಯಮಿತ ಶೀತ ಹಾಗೂ ಉಷ್ಟದ ವಾತಾವರಣದಲ್ಲಿ 75 ದಿನಗಳ ಕಾಲ ಕೃತಕ ಕಾವು ನೀಡಿ ಮರಿಗಳು ಹೊರ ಬರುವಂತೆ ಮಾಡಿದ್ದಾರೆ. ಈ ಹಾವಿನ ಮರಿಗಳನ್ನು ಕೂಡ ಕಾಡಿಗೆ ಬಿಡುವ ಆಶಯವನ್ನು ನಾಗೇಂದ್ರ ಅವರು ಹೊಂದಿದ್ದಾರೆ.
Last Updated : Feb 3, 2023, 8:36 PM IST