ಹರ್ಷ ಮನೆಗೆ ರೇಣುಕಾಚಾರ್ಯ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ ಹೇಳುವಾಗ ಭಾವುಕರಾದ ಶಾಸಕ - ಹರ್ಷ ಮನೆಗೆ ಶಾಸಕ ರೇಣುಕಾಚಾರ್ಯ ಭೇಟಿ
🎬 Watch Now: Feature Video
ಶಿವಮೊಗ್ಗ: ಗುರುವಾರ ಶಾಸಕ ಎಂ ಪಿ ರೇಣುಕಾಚಾರ್ಯ ಅವರು ಪತ್ನಿ ಜೊತೆಯಾಗಿ ಹರ್ಷ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಒಂದು ತಿಂಗಳಿನಿಂದ ನನಗೆ ಏನೋ ಒಂದು ತರ ಕಳವಳ ಆಗ್ತಾ ಇತ್ತು. ಯಾವತ್ತು ಆ ರೀತಿಯಾಗಿ ಅನ್ನಿಸಿರಲಿಲ್ಲ. ಅದಕ್ಕಾಗಿ ಪ್ರತಿ ಹತ್ತು ನಿಮಿಷಕ್ಕೆ ಅವನಿಗೆ ಕರೆ ಮಾಡುತ್ತಿದ್ದೆ. ಆದರೆ ಅವನನ್ನು ಕಳೆದುಕೊಂಡೆ. ಅವನೇ ನನ್ನ ಪ್ರಪಂಚವಾಗಿದ್ದ ಎಂದು ಹರ್ಷ ತಾಯಿ ಪದ್ಮ ಶಾಸಕರ ಬಳಿ ಕಣ್ಣೀರಿಟ್ಟರು. ಆಗ ಶಾಸಕರು ಸಹ ಭಾವುಕರಾದರು. ನಮ್ಮ ಪಕ್ಷ ಮತ್ತು ಸಂಘಟನೆ ನಿಮ್ಮೊಂದಿಗೆ ಇದೆ ಎಂದು ಅಭಯ ನೀಡಿ, ಧೈರ್ಯ ತುಂಬಿದರು.
Last Updated : Feb 3, 2023, 8:17 PM IST