ವಿಜೃಂಭಣೆಯಿಂದ ನಡೆದ ಮಧುರೆ ಶನಿಮಹಾತ್ಮ ಸ್ವಾಮಿಯ 67ನೇ ಬ್ರಹ್ಮರಥೋತ್ಸವ - ಮಧುರೆ ಶನಿಮಹಾತ್ಮ ಸ್ವಾಮಿಯ 67ನೇ ಬ್ರಹ್ಮರಥೋತ್ಸವ
🎬 Watch Now: Feature Video
ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ಧ ಕ್ಷೇತ್ರ ಮಧುರೆ ಕನಸವಾಡಿಯಲ್ಲಿ ಶ್ರೀ ಶನಿಮಹಾತ್ಮ ಸ್ವಾಮಿಯ 67ನೇ ಬ್ರಹ್ಮರಥೋತ್ಸವ ಜರುಗಿತು. ಶನಿಮಹಾತ್ಮ ಹಾಗೂ ಜೇಷ್ಠಾದೇವಿಯ ದೇವಾಲಯಗಳಿರುವ ಕನಸವಾಡಿ ಕ್ಷೇತ್ರವು ರಾಜ್ಯದಲ್ಲಿಯೇ ಹೆಸರುವಾಸಿಯಾಗಿದೆ. ರಥೋತ್ಸವದ ಅಂಗವಾಗಿ, ಶನಿಮಹಾತ್ಮ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಯಾಗ, ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಒಂದು ವಾರ ವಿವಿಧ ಉತ್ಸವ, ನಾಟಕೋತ್ಸವಗಳು ನಡೆಯಲಿವೆ. ಈ ಬಾರಿ ಮುಕ್ತವಾಗಿ ರಥೋತ್ಸವ ಆಚರಣೆಗೆ ನೀಡಿದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು.
Last Updated : Feb 3, 2023, 8:19 PM IST