ಮರ ಹತ್ತಿ ಕುಳಿತ ಕಾಳಿಂಗ ನೋಡಿ .. ಸುರಕ್ಷಿತವಾಗಿ ಹಿಡಿದು ಕಾಡಿಗೆ ಕಳುಹಿಸಿದ ಸ್ನೇಕ್ ಕಿರಣ್! - ಶಿವಮೊಗ್ಗದಲ್ಲಿ ಕಾಳಿಂಗ ಸರ್ಪ ರಕ್ಷಣೆ
🎬 Watch Now: Feature Video
ಶಿವಮೊಗ್ಗ: ಮರದ ಮೇಲೆ ಕುಳಿತ ಬೃಹದಾಕಾರದ ಕಾಳಿಂಗ ಸರ್ಪವನ್ನು ನೋಡಿದ ಜಮೀನಿನ ಮಾಲಿಕ ಹೌಹಾರಿದ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಅಗ್ರಹಾರ ಹೋಬಳಿ ಹಾದಿಗಲ್ಲು ಗ್ರಾಮದಲ್ಲಿ ನಡೆದಿದೆ. ಹೌದು, ವೆಂಕಟೇಶ್ ಎಂಬುವರ ಜಮೀನಿನಲ್ಲಿ ಸರ್ಪ ಕಾಣಿಸಿಕೊಂಡಿತ್ತು. ಮರದ ಮೇಲೆ ಕಾಳಿಂಗ ಕುಳಿತಿರುವುದ ಕಂಡು ಬೆಚ್ಚಿಬಿದ್ದರು. ಕೂಡಲೇ ಅರಣ್ಯ ಇಲಾಖೆ ಹಾಗೂ ಸ್ನೇಕ್ ಕಿರಣ್ಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಕಿರಣ್, ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ, ಮರದ ಮೇಲಿದ್ದ ಕಾಳಿಂಗ ಸರ್ಪವನ್ನು ರಕ್ಷಿಸಿದ್ದಾರೆ. ಕಾಳಿಂಗ ಸರ್ಪವು ಸುಮಾರು 12 ಅಡಿ ಉದ್ದವಿದ್ದು, 9 ಕೆ.ಜಿ. ತೂಕವಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳ ಸಮ್ಮುಖದಲ್ಲಿ ಸರ್ಪವನ್ನು ಸಮೀಪದ ಅರಣ್ಯಕ್ಕೆ ಬಿಡಲಾಯಿತು ಎಂದು ಕಿರಣ್ ಮಾಹಿತಿ ನೀಡಿದರು.
Last Updated : Feb 3, 2023, 8:20 PM IST