ಹುಬ್ಬಳ್ಳಿಯಲ್ಲಿ ಜಾಗೃತಿ ಮೂಡಿಸಲು ಪೊಲೀಸರ ಬೈಕ್ ರ‍್ಯಾಲಿ - ಈಟಿವಿ ಭಾರತ ಕನ್ನಡ
🎬 Watch Now: Feature Video
ಹುಬ್ಬಳ್ಳಿ: ಅಪಘಾತ ಮತ್ತು ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಕೇಶ್ವಾಪುರ ಠಾಣೆಯ ಪೊಲೀಸರು ಬೈಕ್ ರ‍್ಯಾಲಿ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಹುಬ್ಬಳ್ಳಿಯ ಕೇಶ್ವಾಪುರದಿಂದ ಆರಂಭವಾದ ಬೈಕ್ ರ್ಯಾಲಿ ಮಧುರಾ ಕಾಲೋನಿ, ನೆಹರು ನಗರ, ಶಾಂತಿನಗರ, ಗೊಪ್ಪನಕೊಪ್ಪ, ಬೆಂಗೇರಿ, ರಾಮನಗರ ಮಾರ್ಗವಾಗಿ ಸರ್ವೋದಯ ಸರ್ಕಲ್ ತಲುಪಿತು. ರ‍್ಯಾಲಿ ಉದ್ದಕ್ಕೂ ಪೊಲೀಸರು ಸಂಚಾರಿ ನಿಯಮಗಳ ಕುರಿತು ಜನರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಿದರು.
Last Updated : Feb 3, 2023, 8:32 PM IST