ಅಪ್ಪಟ ಚಿನ್ನದ ವ್ಯಕ್ತಿತ್ವವುಳ್ಳ ವಿಜಯ್ ರಾಘವೇಂದ್ರರಿಗೆ ಭಗವಂತ ನೋವು ತಡೆಯುವ ಶಕ್ತಿ ನೀಡಲಿ: ವಿ. ಸೋಮಣ್ಣ
🎬 Watch Now: Feature Video
ಬೆಂಗಳೂರು: ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹೃದಯಾಘಾತಕ್ಕೊಳಗಾಗಿ ಸಾಗರೋತ್ತರ ಪ್ರದೇಶದಲ್ಲಿ ಕೊನೆಯುಸಿರೆಳೆದಿದ್ದು, ಸ್ಯಾಂಡಲ್ವುಡ್ಗೆ ಮಾತ್ರವಲ್ಲದೇ ಕನ್ನಡಿಗರ ದುಃಖಕ್ಕೆ ಕಾರಣವಾಗಿದೆ. ಸುಂದರ ಪ್ರೇಮಪಕ್ಷಿಗಳಂತೆ ಈ ಜೋಡಿ ಗುರುತಿಸಿಕೊಂಡಿತ್ತು. ಆದರೆ, ಸ್ಪಂದನಾ ಇಷ್ಟು ಬೇಗ ಇಹಲೋಕ ತ್ಯಜಿಸಿದ್ದಕ್ಕೆ, ವಿಜಯ್ ರಾಘವೇಂದ್ರ ಒಂಟಿಯಾಗಿದ್ದಕ್ಕೆ ಕನ್ನಡಿಗರು ಕಣ್ಣೀರು ಸುರಿಸಿದ್ದಾರೆ. ಇದೀಗ ಮಾಜಿ ಸಚಿವ ವಿ. ಸೋಮಣ್ಣ ಅವರೂ ಕೂಡ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸೋಮಣ್ಣ ಅವರು, ''ಜೀವನದಲ್ಲಿ ಸಾಕಷ್ಟು ಕಹಿ ಘಟನೆಗಳನ್ನು ನೋಡಿದ್ದೇನೆ, ಇಂತಹ ದುರಂತವನ್ನು ಕನಸಿನಲ್ಲೂ ನೆನೆಸಿರಲಿಲ್ಲ. ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದನ್ನು ಶಿವರಾಂ ಅವರನ್ನು ನೋಡಿ ಕಲಿಯಬೇಕು. ಅನಿರೀಕ್ಷಿತ ಘಟನೆಯಿಂದ ಸಾಕಷ್ಟು ನೋವು ಅನುಭವಿಸಬೇಕಾದ ಪರಿಸ್ಥಿತಿ ಬಂದಿದೆ. ಒಳ್ಳೆಯವರಿಗೇನೇ ಆ ಭಗವಂತ ಯಾಕೆ ಇಂತಹ ಪರೀಕ್ಷೆ ಕೊಡುತ್ತಾನೆಂದು ಗೊತ್ತಿಲ್ಲ. ಮನುಷ್ಯನಿಗೆ ಯಾವುದೂ ಶಾಶ್ವತ ಅಲ್ಲ. ಶಿವರಾಮ್, ಹರಿಪ್ರಸಾದ್, ಚಿನ್ನೆಗೌಡ್ರು, ಅಪ್ಪಟ ಚಿನ್ನದ ವ್ಯಕ್ತಿತ್ವವುಳ್ಳ ವಿಜಯ್ ರಾಘವೇಂದ್ರ ಅವರಿಗೆ ನೋವನ್ನು ತಡೆಯುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಇಂದು ಸಂಜೆಯೊಳಗೆ ಸ್ಪಂದನಾ ವಿಜಯ್ ಪಾರ್ಥಿವ ಶರೀರ ಬೆಂಗಳೂರಿಗೆ : ಶ್ರೀಮುರಳಿ ಆಪ್ತರ ಮಾಹಿತಿ