ಬೆಂಗಳೂರು: ಲಾರಿ ಡಿಕ್ಕಿಯಾಗಿ ನೆಲಕ್ಕುರುಳಿದ ಅಂಡರ್‌ಪಾಸ್ ತಡೆಗಂಬ- ವಿಡಿಯೋ - ETV Bharat Karnataka
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/29-10-2023/640-480-19885690-thumbnail-16x9-mh.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Oct 29, 2023, 1:00 PM IST
ಬೆಂಗಳೂರು: ಟ್ಯಾಂಕರ್ ಲಾರಿ ಚಾಲಕನ ನಿರ್ಲಕ್ಷ್ಯದಿಂದಾಗಿ ಅಂಡರ್ಪಾಸ್ಗೆ ಅಳವಡಿಸಿದ್ದ ಕಬ್ಬಿಣದ ತಡೆಗಂಬ ನೆಲಕ್ಕುರುಳಿದ್ದು ಸ್ವಲ್ಪದರಲ್ಲೇ ಅನಾಹುತ ತಪ್ಪಿದೆ. ಕಳೆದ ತಡರಾತ್ರಿ ಸದಾಶಿವನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ಯಾಲೆಸ್ ರಸ್ತೆ ಬಳಿ ಘಟನೆ ನಡೆಯಿತು. ತಡೆಗಂಬಕ್ಕೆ ಡಿಕ್ಕಿ ಹೊಡೆದು ಹೋದ ಲಾರಿ ಚಾಲಕನ ನಿರ್ಲಕ್ಷ್ಯದ ಚಾಲನೆ ಹಿಂಬದಿಯಲ್ಲಿ ಸಂಚರಿಸುತ್ತಿದ್ದ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಂಡರ್ಪಾಸ್ನಲ್ಲಿ ಭಾರಿ ವಾಹನಗಳ ಪ್ರವೇಶಕ್ಕೆ ನಿಷೇಧವಿರುವ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ತಡೆಗಂಬ ನಿರ್ಮಾಣ ಮಾಡಲಾಗುತ್ತದೆ. ಪ್ಯಾಲೆಸ್ ರಸ್ತೆ ಅಂಡರ್‌ಪಾಸ್ ಮೂಲಕ ಸಾಗುತ್ತಿದ್ದ ಲಾರಿಯ ಮೇಲ್ಭಾಗ ತಡೆಗಂಬಕ್ಕೆ ತಾಗಿದೆ. ಆದರೂ ಸಹ ಚಾಲಕ ಲಾರಿ ಚಲಾಯಿಸಿಕೊಂಡು ಹೋಗಿದ್ದು ಕಂಬ ನೆಲಕ್ಕೆ ಬಿದ್ದಿದೆ. ಲಾರಿ ಹಿಂದೆ ಸಾಗುತ್ತಿದ್ದ ವಾಹನಗಳ ಚಾಲಕರು ಎಚ್ಚೆತ್ತುಕೊಂಡಿದ್ದು ಅನಾಹುತ ತಪ್ಪಿದೆ. ಘಟನೆಯ ಸಂಪೂರ್ಣ ದೃಶ್ಯ ಕಾರೊಂದರ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಸದಾಶಿವನಗರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ: ದೇವಾಲಯಕ್ಕೆ ಹೋಗಲು ರಸ್ತೆ ದಾಟುತ್ತಿದ್ದ ಮಹಿಳೆಗೆ ಬೈಕ್ ಡಿಕ್ಕಿ - VIDEO