'ಪುರುಷರೂ ಕೂಡ ಕಣ್ಣೀರು ಹೊರಹಾಕಬೇಕು': ಮೆಂಟಲ್​ ಹೆಲ್ತ್ ಆ್ಯಪ್​ಗೆ ಹಣ ಹೂಡಿದ ಸುನೀಲ್​ ಶೆಟ್ಟಿ - Mental Health app

🎬 Watch Now: Feature Video

thumbnail

By

Published : Aug 3, 2023, 1:14 PM IST

ಬಾಲಿವುಡ್​ ಹಿರಿಯ ನಟ ಸುನೀಲ್ ಶೆಟ್ಟಿ ಅವರು ಆನ್​ಲೈನ್​​ ಮೆಂಟಲ್​ ಹೆಲ್ತ್ ಸೆಂಟರ್​ ಅನ್ನು ಲಾಂಚ್​ ಮಾಡಿದ್ದಾರೆ. ಇದು 'ವೇದ ಪುನರ್ವಸತಿ ಮತ್ತು ವೆಲ್​ನೆಸ್​'ನ 24/7 ಆನ್‌ಲೈನ್ ಸೇವೆಯಾಗಿದ್ದು, ಮಾನಸಿಕ ಆರೋಗ್ಯದ ಕಡೆಗೆ ಗಮನ ಹರಿಸುತ್ತದೆ. ಬಾಲಿವುಡ್​ ನಟ ಈ ಕೇಂದ್ರದ ಮಾರ್ಗದರ್ಶಕರು ಮತ್ತು ಪ್ರಾಥಮಿಕ ಹೂಡಿಕೆದಾರರಲ್ಲಿ ಒಬ್ಬರಾಗಿದ್ದಾರೆ. ವರ್ಚುಯಲ್​​ ಮಾನಸಿಕ ಆರೋಗ್ಯ ಸಹಾಯ ಕೇಂದ್ರ ಅಂದರೆ ಆ್ಯಪ್​​ (ಲೆಟ್ಸ್ ಗೆಟ್​ ಹ್ಯಾಪಿ) ಪ್ರಾರಂಭಿಸಿದ ನಂತರ ಮಾನಸಿಕ ಸ್ವಾಸ್ತ್ಯದ ಕುರಿತು ಮಾಧ್ಯಮ ಸಂವಾದವನ್ನು ನಡೆಸಿ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.  

ಇಂತಹ ಅಭಿಯಾನವನ್ನು ಮೊದಲೇ ಪರಿಚಯಿಸಿದ್ದರೆ ದಿ. ನಟ ಸುಶಾಂತ್ ಸಿಂಗ್ ರಜಪೂತ್‌ ಅವರಿಗೆ ಪ್ರಯೋಜನವಾಗುತ್ತಿತ್ತೇ? ಎಂದು ಪ್ರಶ್ನಿಸಿದಾಗ, ತಮ್ಮ ಜೀವನದ ಕುರಿತು ಕೆಲ ಉದಾರಣೆಗಳನ್ನು ಕೊಟ್ಟರು. ತಾನು ತನ್ನ ಜೀವನದಲ್ಲಿ ಹೆಚ್ಚಿನ ವಿಷಯಗಳನ್ನು ಶೇರ್ ಮಾಡಿಕೊಳ್ಳಲು, ಇನ್ನೊಬ್ಬರಿಂದ ಸಹಾಯ ಪಡೆಯಲು ಇಚ್ಛಿಸುತ್ತೇನೆ. ಸಂತೋಷ ಮತ್ತು ಕುಟುಂಬಕ್ಕೆ ಮೊದಲ ಆದ್ಯತೆ ನೀಡುತ್ತೇನೆ ಎಂದು ಬಹಿರಂಗಪಡಿಸಿದರು. ಇನ್ನೂ ಪುರುಷರು ಕೂಡ ತಮ್ಮ ಭಾವನೆ ವ್ಯಕ್ತಪಡಿಸಬೇಕು. ವಿಷಯಗಳನ್ನು ಹಂಚಿಕೊಳ್ಳಬೇಕು. ಕಣ್ಣೀರು ಹೊರಹಾಕಬೇಕು ಆಗಲೇ ಮಾನಸಿಕ ಆರೋಗ್ಯ ಸರಿಯಾಗಿರಲು ಸಾಧ್ಯ ಎಂದು ಸಹ ತಿಳಿಸಿದರು.

ಇದನ್ನೂ ಓದಿ: ಎವರ್ ಗ್ರೀನ್ ಹೀರೋ ಅನಂತ್​ ನಾಗ್ ಅಭಿನಯ ಬದುಕಿಗೆ 50 ವರ್ಷ.. ಮೇರು ನಟನ ಸಿನಿ ಪಯಣ ಹೀಗಿದೆ

ಸುನೀಲ್ ಶೆಟ್ಟಿ ಅವರ ಮುಂದಿನ ಪ್ರಾಜೆಕ್ಟ್ ಗಮನಿಸುವುದಾದರೆ,  ಹೇರಾ ಫೇರಿ 4ರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆನ್‌ಲೈನ್ ಸೀರಿಸ್​ಗಳಾದ ಧಾರಾವಿ ಬ್ಯಾಂಕ್ ಮತ್ತು ಹಂಟರ್‌ನ ಎರಡನೇ ಸೀಸನ್‌ಗಳ ಕೆಲಸ ನಡೆಯುತ್ತಿದ್ದು, ಮುಂದಿನ 6-8 ತಿಂಗಳುಗಳಲ್ಲಿ ಸೀರಿಸ್​​ ನಿಮಗೆ ಲಭ್ಯವಾಗಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.