ನಿರ್ಮಾಪಕರಿಂದ ಆರೋಪ: ಶಿವಮೊಗ್ಗದಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳ ಆಕ್ರೋಶ - Sudeep latest news
🎬 Watch Now: Feature Video
ಶಿವಮೊಗ್ಗ: ನಟ ಕಿಚ್ಚ ಸುದೀಪ್ ಹಣ ಪಡೆದು ಸಿನಿಮಾ ಮಾಡಿಲ್ಲ ಎಂದು ಆರೋಪಿಸಿರುವ ನಿರ್ಮಾಪಕರಾದ ಎಂ.ಎನ್. ಕುಮಾರ್ ಮತ್ತು ರೆಹಮಾನ್ ಅವರ ವಿರುದ್ಧ ಶಿವಮೊಗ್ಗದಲ್ಲಿ ಇಂದು ಸುದೀಪ್ ಅಭಿಮಾನಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಗೋಪಿ ವೃತ್ತದಿಂದ ಮಹಾವೀರ ವೃತ್ತದವರೆಗೆ ಪ್ರತಿಭಟನೆ ನಡೆಯಿತು.
ನಿರ್ಮಾಪಕರಾದ ಸೂರಪ್ಪ ಬಾಬು, ರೆಹಮಾನ್, ಎಂ.ಎನ್. ಕುಮಾರ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಸುದೀಪ್ ಅವರ ಹಿಂದೆ ನಮ್ಮಂತ ಕೋಟ್ಯಂತರ ಅಭಿಮಾನಿಗಳು ಜೊತೆಗಿದ್ದೇವೆ. ಇಂದು ಕೇವಲ ಸಣ್ಣ ಮಟ್ಟದಲ್ಲಿ ಪ್ರತಿಭಟನೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ಕೊಟ್ಟರು. ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಇಂತಹ ಸುಳ್ಳು ಆರೋಪ ಮಾಡುವುದನ್ನು ಬೀಡಬೇಕು, ಇಲ್ಲವಾದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಕುಮಾರ್ - ಕಿಚ್ಚ ವಾರ್: ನಿರ್ಮಾಪಕರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ನಟ ಸುದೀಪ್
ನಿರ್ಮಾಪಕ ಎನ್. ಕುಮಾರ್ ಆರೋಪ ಮಾಡಿರುವ ವಿಚಾರವಾಗಿ ಸುದೀಪ್ ಕ್ರಿಮಿನಲ್ ಡಿಫಾಮೇಷನ್ (ಮಾನನಷ್ಟ) ಮೊಕದ್ದಮೆ ಹೂಡಿದ್ದಾರೆ. ಎಲ್ಲದಕ್ಕೂ ನ್ಯಾಯಾಲಯ ಉತ್ತರ ಕೊಡಲಿದೆ ಎಂದು ಅವರು ಹೇಳಿದ್ದಾರೆ.