ಆ್ಯಕ್ಷನ್ ಸ್ಟಾರ್ ಆಗಿ ಒಂದು ಯುಗವನ್ನೇ ಸೃಷ್ಟಿಸಲಿದ್ದಾರೆ: ಎಸ್ಆರ್ಕೆ ಬಗ್ಗೆ ಸಿದ್ಧಾರ್ಥ್ ಆನಂದ್ ಗುಣಗಾನ - ಶಾರುಖ್ ಬಗ್ಗೆ ಸಿದ್ಧಾರ್ಥ್ ಆನಂದ್ ಹೇಳಿಕೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-17666056-thumbnail-4x3-sdbbvtrf.jpg)
ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ನಟನೆಯ ಪಠಾಣ್ ಸಿನಿಮಾ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಈಗಾಗಲೇ 700 ಕೋಟಿ ಕಲೆಕ್ಷನ್ ಮಾಡಿರುವ ಪಠಾಣ್ ಚಿತ್ರ ದಾಖಲೆಗಳನ್ನು ನಾಶ ಮಾಡಿದೆ. ತಮ್ಮ ಚಿತ್ರದ ಅದ್ಭುತ ಯಶಸ್ಸಿನ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರು ನಟ ಶಾರುಖ್ ಖಾನ್ ಬಗ್ಗೆ ಗುಣಗಾನ ಮಾಡಿದ್ದಾರೆ.
ರೊಮ್ಯಾಂಟಿಕ್ ಹೀರೋ ಎಂದೇ ಜನಪ್ರಿಯರಾಗಿರುವ ನಟ ಶಾರುಖ್ ಖಾನ್ ಈಗಷ್ಟೇ ಹೊಸದನ್ನು ಶುರು ಮಾಡಿದ್ದಾರೆ. ಇದು ಕೇವಲ ಆರಂಭ, ಆ್ಯಕ್ಷನ್ ಸ್ಟಾರ್ ಆಗಿ ಯುಗವನ್ನೇ ಸೃಷ್ಟಿಸಲಿದ್ದಾರೆ. ಅವರಿಗೆ 57 ವರ್ಷವಾಯಿತು ಎಂದು ಯಾರಾದರೂ ಹೇಳಿದರಷ್ಟೇ ಗೊತ್ತಾಗಬಹುದು. ವಯಸ್ಸು ಕೇವಲ ಒಂದು ನಂಬರ್. ಎಸ್ಆರ್ಕೆ ಅವರಿಗಿರುವ ಆ ಉತ್ಸಾಹ, ಎನರ್ಜಿ ಬಹುಶಃ ಯಾರಿಗೂ ಇರಲು ಸಾಧ್ಯವಿಲ್ಲ ಎಂದು ಸಿದ್ಧಾರ್ಥ್ ಆನಂದ್ ಅವರು ಬಾಲಿವುಡ್ ಕಿಂಗ್ ಖಾನ್ ಬಗ್ಗೆ ಗುಣಗಾನ ಮಾಡಿದ್ದಾರೆ.
ಸಿದ್ಧಾರ್ಥ್ ಆನಂದ್ ಅವರ ಆ್ಯಕ್ಷನ್ ಚಿತ್ರಗಳಾದ ವಾರ್ ಮತ್ತು ಬ್ಯಾಂಗ್ ಬ್ಯಾಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಆ ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ನಟಿಸಿದ್ದರೆ, ಪಠಾಣ್‌ನಲ್ಲಿ ದೇಶದ ಬಹುದೊಡ್ಡ ಸೂಪರ್‌ಸ್ಟಾರ್‌ಗಳು ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ಪಠಾಣ್‌ನ ಭಾಗವಾಗಿರುವ ಬಗ್ಗೆ ಮಾತನಾಡುತ್ತಾ, ಇಬ್ಬರೂ ಖಾನ್‌ಗಳನ್ನು ಒಂದೇ ತೆರೆ ಮೇಲೆ ತಂದ ಕೀರ್ತಿ ನಿರ್ಮಾಪಕ ಆದಿತ್ಯ ಚೋಪ್ರಾ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಇದನ್ನೂ ಓದಿ: 'ಪಠಾಣ್ ಬಿಡಿ, ಆ್ಯಕ್ಷನ್ ಹೀರೋ ಸಿನಿಮಾ ನೋಡಿ' ಎಂದ ಅಭಿಮಾನಿಗೆ ಆಯುಷ್ಮಾನ್ ಖುರಾನ ಹೀಗಂದ್ರು!