'ವಿಜಯಕಾಂತ್ ನಿಧನ ತುಂಬಲಾರದ ನಷ್ಟ': ಅಂತಿಮ ದರ್ಶನ ಪಡೆದ ರಜನಿಕಾಂತ್
🎬 Watch Now: Feature Video
Published : Dec 29, 2023, 1:05 PM IST
|Updated : Dec 29, 2023, 1:19 PM IST
ಚೆನ್ನೈ (ತಮಿಳುನಾಡು): ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ಮತ್ತು ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಸಂಸ್ಥಾಪಕ ವಿಜಯಕಾಂತ್ ಅವರು ನಿನ್ನೆ ಕೊನೆಯುಸಿರೆಳೆದರು. ಇಂದು ಚೆನ್ನೈನ ಅಣ್ಣಾ ಸಲೈನಲ್ಲಿರುವ ಐಲ್ಯಾಂಡ್ ಗ್ರೌಂಡ್‌ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಹಿರಿಯ, ಖ್ಯಾತ ನಟ ರಜನಿಕಾಂತ್ ಆಗಮಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಸಂತಾಪ ಸೂಚಿಸಿದ ರಜಿನಿಕಾಂತ್, ''ವಿಜಯಕಾಂತ್ ಅವರಷ್ಟು ಒಳ್ಳೆಯ ವ್ಯಕ್ತಿ ನಮಗೆ ಸಿಗುವುದಿಲ್ಲ, ರಾಜಕೀಯ ಮತ್ತು ಚಿತ್ರರಂಗದಲ್ಲಿ ಅಂಥವರು ಯಾರೂ ಇಲ್ಲ. ಇದು ತುಂಬಲಾರದ ನಷ್ಟ'' ಎಂದು ಕಂಬನಿ ಮಿಡಿದರು.
ಇದನ್ನೂ ಓದಿ: ವಿಜಯಕಾಂತ್ ಸಿನಿಪಯಣ: 150 ಸಿನಿಮಾ, ಒಂದೇ ವರ್ಷ 18 ಚಿತ್ರ ತೆರೆಗೆ
71ರ ಹರೆಯದ ವಿಜಯಕಾಂತ್ ದೀರ್ಘಕಾಲದ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಗುರುವಾರ ಮುಂಜಾನೆ ಚೆನ್ನೈನಲ್ಲಿ ನಿಧನರಾದರು. ಡಿಎಂಡಿಕೆ ಮುಖ್ಯಸ್ಥರ ಪಾರ್ಥಿವ ಶರೀರವನ್ನು ಡಿಎಂಡಿಕೆ ಕಚೇರಿಯಲ್ಲಿ ಇರಿಸಲಾಗಿತ್ತು. ಅನೇಕ ರಾಜಕೀಯ ಮುಖಂಡರು, ನಟರು ಮತ್ತು ಇತರರು ಆಗಮಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಇದಕ್ಕೂ ಮುನ್ನ ನವೆಂಬರ್‌ನಲ್ಲಿ ವಿಜಯಕಾಂತ್ ಅವರನ್ನು ಎಂಐಒಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯ ಹದಗೆಟ್ಟು ಕೆಮ್ಮು ಮತ್ತು ಗಂಟಲು ನೋವಿನಿಂದ ಬಳಲುತ್ತಿದ್ದ ಹಿನ್ನೆಲೆ 14 ದಿನಗಳ ಕಾಲ ವೈದ್ಯರ ನಿಗಾದಲ್ಲಿದ್ದರು. ಆದ್ರೆ ನಿನ್ನೆ ಕೊನೆಯುಸಿರೆಳೆದಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಕೋವಿಡ್ನಿಂದ ಬಳಲುತ್ತಿದ್ದ ಹಿರಿಯ ನಟ, ಡಿಎಂಡಿಕೆ ನಾಯಕ ವಿಜಯಕಾಂತ್ ವಿಧಿವಶ