ETV Bharat / state

ಸಂಪುಟ ಪುನಾರಚನೆ ಮಾಡಿದರೆ ಒಳ್ಳೆಯದೇ, ಬೇರೆಯವರಿಗೂ ಅವಕಾಶ ಸಿಗಬೇಕು: ದಿನೇಶ್​ ಗುಂಡೂರಾವ್​ - DINESH GUNDURAO

ಎರಡು ವರ್ಷದ ಬಳಿಕ ಸಂಪುಟ ಪುನಾರಚನೆ ಮಾಡಿದರೆ ಒಳ್ಳೆಯದೇ ತಾನೇ. ನಾವೇ ಇರಬೇಕು, ಬೇರೆಯವರು ಮಂತ್ರಿಗಳಾಗಬಾರದು ಎಂದೇನಿಲ್ಲ. ಅದಕ್ಕೋಸ್ಕರ ಎಲ್ಲರೂ ತಯಾರಾಗಿರಬೇಕು ಎಂದು ಸಚಿವ ದಿನೇಶ್​ ಗುಂಡೂರಾವ್​ ಹೇಳಿದ್ದಾರೆ.

ದಿನೇಶ್​ ಗುಂಡೂರಾವ್​
ದಿನೇಶ್​ ಗುಂಡೂರಾವ್​ (ETV Bharat)
author img

By ETV Bharat Karnataka Team

Published : Nov 27, 2024, 5:42 PM IST

ಶಿವಮೊಗ್ಗ: ಎರಡು ವರ್ಷದ ಬಳಿಕ ಸಂಪುಟ ಪುನಾರಚನೆ ಮಾಡಿದರೆ ಒಳ್ಳೆಯದೇ ತಾನೇ. ಬೇರೆಯವರು ಇರುತ್ತಾರೆ, ಅವರಿಗೂ ಅವಕಾಶ ಸಿಗಬೇಕು. ಆ ನಿಟ್ಟಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್​ ಹೇಳಿಕೆ ನೀಡಿದ್ದಾರೆ. ನಾವೇ ಇರಬೇಕು, ಬೇರೆಯವರು ಮಂತ್ರಿಗಳಾಗಬಾರದು ಎಂದೇನಿಲ್ಲ. ಅದಕ್ಕೋಸ್ಕರ ಎಲ್ಲರೂ ತಯಾರಾಗಿರಬೇಕು ಎಂದು ಸಚಿವ ದಿನೇಶ್​ ಗುಂಡೂರಾವ್​ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಮಂಗನ ಕಾಯಿಲೆ ಪೀಡಿತ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂಜಾಗ್ರತಾ ಕ್ರಮ ಕೈಗೊಳ್ಳುವ ಸಂಬಂಧ ಸಭೆ ನಡೆಸಲಾಯಿತು. ನಾಲ್ಕು ಜಿಲ್ಲೆಯ ಅಧಿಕಾರಿಗಳ ಸಭೆ ನಡೆಸಲಾಯಿತು. ಇಂದು ಭದ್ರಾವತಿಯ ಆಸ್ಪತ್ರೆಗೆ ಭೇಟಿ ‌ನೀಡಿ ಪರಿಶೀಲನೆ ನಡೆಸಿದ್ದೇನೆ. ಭದ್ರಾವತಿಯಲ್ಲಿ ಹೊಸ ಆಸ್ಪತ್ರೆ ನಿರ್ಮಿಸಬೇಕು ಎಂದು ಮನವಿ ಬಂದಿದೆ. ಈ ಕುರಿತು ಪರಿಶೀಲನೆ ನಡೆಸಲಾಗುವುದು. ರಿಪ್ಪ‌ನ್​ಪೇಟೆ ಹಾಗೂ ಚಂದ್ರಗುತ್ತಿ ಪಿಹೆಚ್​ಸಿಗಳನ್ನು ಮೇಲ್ದರ್ಜೆಗೇರಿಸಬೇಕೆಂಬ ಮನವಿ ಬಂದಿದ್ದು, ಇವೆರಡನ್ನು ಮೇಲ್ದರ್ಜೆಗೇರಿಸಲಾಗುವುದು. ಸಾಗರ ಆಸ್ಪತ್ರೆ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ. ಇದನ್ನೂ ಮೇಲ್ದರ್ಜೆಗೇರಿಸಲಾಗುತ್ತದೆ ಎಂದು ತಿಳಿಸಿದರು.

ದಿನೇಶ್​ ಗುಂಡೂರಾವ್​ (ETV Bharat)

ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳಿಗೆ ತೀವ್ರ ನಿಗಾ ಘಟಕ: ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳಿಗೆ ತೀವ್ರ ನಿಗಾ ಘಟಕ ಮಾಡಬೇಕಾಗಿದೆ. ಇದರಿಂದ ಮಕ್ಕಳ ಸಾವು ಕಡಿಮೆ ಆಗುತ್ತದೆ. ಇದನ್ನು ರಾಜ್ಯದ ಎಲ್ಲ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ವಿಸ್ತರಣೆ ಮಾಡಲಾಗುತ್ತದೆ. ಮುಂದಿನ ತಿಂಗಳಲ್ಲಿ ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರ್ ಕಿಮೋಥೆರಪಿ ಪ್ರಾರಂಭ‌ ಮಾಡಲಾಗುತ್ತದೆ. ಇದಕ್ಕೆ ಸಿಎಂ ಚಾಲನೆ ನೀಡಲಿದ್ದಾರೆ ಎಂದರು.

ಸಿಸೇರಿಯನ್ ಪ್ರಮಾಣ ಕಡಿಮೆ ಮಾಡಬೇಕಿದೆ: ಹೆರಿಗೆಯಲ್ಲಿ ಸಿಸೇರಿಯನ್ ಪ್ರಮಾಣ ಕಡಿಮೆ ಮಾಡಬೇಕಿದೆ. ಈ ಸಂಬಂಧ ಸರ್ಕಾರಿ ಸೇರಿದಂತೆ ಖಾಸಗಿ ಆಸ್ಪತ್ರೆಗಳ ಮಾಹಿತಿ ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಹಜ ಹೆರಿಗೆಗೆ ಆದ್ಯತೆ ನೀಡಿದರೆ ತಾಯಿ ಮತ್ತು ಮಗು ಎರಡು ಆರೋಗ್ಯಕರವಾಗಿರುವುದಕ್ಕೆ ಸಹಾಯಕವಾಗುತ್ತದೆ ಎಂದರು.

ಖಾಸಗಿ ಆಸ್ಪತ್ರೆಯವರು ತಮ್ಮ ಚಿಕಿತ್ಸೆ ದರ ಪಟ್ಟಿಯನ್ನು ಜನರಿಗೆ ಕಾಣುವಂತೆ ಹಾಕಬೇಕಿದೆ. ಇದರ ಕುರಿತು ಡಿಹೆಚ್ಒ ಅವರು ಗಮನ ಹರಿಸಬೇಕಿದೆ. ಜೊತೆಗೆ ನಕಲಿ ವೈದ್ಯರು ಹಾಗೂ ಆರ್ಯುವೇದ ವೈದ್ಯರು ಅಲೋಪತಿ ಚಿಕಿತ್ಸೆ ನೀಡುತ್ತಿರುವ ಬಗ್ಗೆಯೂ ಗಮನ ಹರಿಸಿ, ಅಂಥವರು ಕಂಡು ಬಂದಲ್ಲಿ ಕಠಿಣ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.

ಅದಷ್ಟು ಬೇಗ ಸಿಬ್ಬಂದಿ ಭರ್ತಿ: ಶಿವಮೊಗ್ಗ ಜಿಲ್ಲೆಗೆ ಮೂರು ಮೊಬೈಲ್ ಮೆಡಿಕಲ್ ಯೂನಿಟ್ ನೀಡಲಾಗುತ್ತದೆ. ಇವು ಸಾಗರ, ಹೊಸನಗರ ಹಾಗೂ ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಸೇವೆ ನೀಡಲಿವೆ. ನಮ್ಮ ಇಲಾಖೆಯಲ್ಲಿ ಶೇ.30 ರಿಂದ 40 ರಷ್ಟು ಸಿಬ್ಬಂದಿ ಕೊರತೆ ಇದೆ. ಅದಷ್ಟು ಬೇಗ ಸಿಬ್ಬಂದಿ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ಸಂಪುಟ ಪುನಾರಚನೆ ಬಗ್ಗೆ ಸಿಎಂ, ಕೆಪಿಸಿಸಿ ಅಧ್ಯಕ್ಷರಿಂದ ತೀರ್ಮಾನ: ಸಚಿವ ಜಿ.ಪರಮೇಶ್ವರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.