'ವಿಶಾಲ್​ ಸಿಬಿಎಫ್​ಸಿ ಚಿತ್ರಣ ತೆರೆದಿಟ್ಟಿದ್ದಾರೆ, ಭ್ರಷ್ಟಾಚಾರ ನಡೆಯುತ್ತಿದೆ': ಮಾಜಿ ಅಧ್ಯಕ್ಷ ಪಹ್ಲಾಜ್​​ ನಿಹಲಾನಿ!

By ETV Bharat Karnataka Team

Published : Sep 29, 2023, 5:45 PM IST

thumbnail

ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ಅವರು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್‌ (CBFC) ಮುಂಬೈ ಕಚೇರಿ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ. ಸಿಬಿಎಫ್​ಸಿ ಭ್ರಷ್ಟಾಚಾರಕ್ಕೆ ಬಲಿಯಾಗಿರುವುದಾಗಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಡಿಯೋ ಸಂದೇಶದ ಮೂಲಕ ಬಹಿರಂಗಪಡಿಸಿದ್ದಾರೆ. ನಟ ವಿಶಾಲ್​​​ ಪೋಸ್ಟ್ ಮಾಡಿದ ಬಳಿಕ ಸಿಬಿಎಫ್‌ಸಿ ಮಾಜಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.  

ತಮಿಳು ನಟ ವಿಶಾಲ್ ಆರೋಪಕ್ಕೆ ಪ್ರತಿಕ್ರಿಯಿಸಿಸಿದ ಸಿಬಿಎಫ್‌ಸಿ ಮಾಜಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ, ''ಲಂಚ ಕೊಟ್ಟಿರುವುದಾಗಿ ಸ್ವತಃ ನಿರ್ಮಾಪಕರೇ ಹೇಳಿಕೆ ನೀಡಿರುವುದು ನಿಜ. ಇದೊಂದು ಸ್ಟ್ಯಾಂಡರ್ಡ್ ಪ್ರೊಸೀಜರ್. ಸಿಬಿಎಫ್​​ಸಿ ಚಿತ್ರಣವನ್ನು ನಟ ಸಮರ್ಥವಾಗಿ ಬಯಲಿಗೆಳೆದಿದ್ದಾರೆ. ಈ (ಕೇಂದ್ರ) ಆಡಳಿತ ರಚನೆಯಾಯಿತೋ ಅಂದು ನಾ ಖಾವುಂಗಾ ನಾ ಖಾನೆ ದೂಂಗಾ ಎಂಬುದನ್ನು ಕೇಳಿದ್ದೆವು.  ಆದರೆ ಸೆಂಟ್ರಲ್​ ಬೋರ್ಡ್ ಆಫ್​ ಫಿಲ್ಮ್ ಸರ್ಟಿಫಿಕೇಶನ್​​ ಲಂಚ ಸ್ವೀಕರಿಸುತ್ತಿದೆ'' ಎಂದು ಅವರು ತಿಳಿಸಿದ್ದಾರೆ. ಅಧ್ಯಕ್ಷರು ಕೆಲಸಕ್ಕೆ ಬರುವುದಿಲ್ಲ, ದಿನನಿತ್ಯದ ಕೆಲಸಗಳಲ್ಲಿ ಭಾಗವಹಿಸುವುದಿಲ್ಲ ಎಂದು ಸಿಬಿಎಫ್‌ಸಿ ಅಧ್ಯಕ್ಷ ಪ್ರಸೂನ್ ಜೋಶಿ ಅವರನ್ನೂ ಪಹ್ಲಾಜ್​ ನಿಹಲಾನಿ ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ: ಮಾರ್ಕ್ ಆ್ಯಂಟೋನಿ ಹಿಂದಿ ಸೆನ್ಸಾರ್‌ಗಾಗಿ 6.5 ಲಕ್ಷ ರೂ ಲಂಚ ಪಾವತಿಸಿದೆ: ಸಿಬಿಎಫ್‌ಸಿ ವಿರುದ್ಧ ನಟ ವಿಶಾಲ್ ಆರೋಪ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.