ಸಿನಿಮಾಗೆ ಬಣ್ಣ ಹಚ್ಚಿದ ಕಾಂಗ್ರೆಸ್‌ ಶಾಸಕ ಶಿವಲಿಂಗೇಗೌಡ: ವಿಡಿಯೋ - ​ ETV Bharat Karnataka

🎬 Watch Now: Feature Video

thumbnail

By ETV Bharat Karnataka Team

Published : Oct 31, 2023, 9:45 PM IST

ಹಾಸನ: ಅರಸೀಕೆರೆ ಕಾಂಗ್ರೆಸ್ ಶಾಸಕ ಶಿವಲಿಂಗೇ ಗೌಡ ರಾಜಕೀಯದಿಂದ ಸ್ಯಾಂಡಲ್​ವುಡ್‌ಗೆ ಕಾಲಿಟ್ಟಿದ್ದಾರೆ. ಶಾಸಕರು ಕನ್ನಡ ಸಿನಿಮಾವೊಂದರ ಚಿತ್ರೀಕರಣದಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಅರಸೀಕೆರೆ ಹೊರವಲಯದಲ್ಲಿರುವ ಗಿಜಿ ಎಂಬಲ್ಲಿನ ಮನೆಯೊಂದರಲ್ಲಿ ಚಿತ್ರೀಕರಣ ನಡೆಯಿತು.

ಜೇನುಕಲ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ 'ಇದು ನಮ್ಮ ಶಾಲೆ' ಎಂಬ ಶೀರ್ಷಿಕೆ​ ಇರುವ ಚಿತ್ರಕ್ಕೆ ಕೃಷ್ಣ ಬೆಳ್ತಂಗಡಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಕೆಲವು ಸೀನ್​ಗಳಲ್ಲಿ ಸಿಎಂ ಪಾತ್ರಕ್ಕೆ ಶಿವಲಿಂಗೇ ಗೌಡ ಬಣ್ಣ ಹಚ್ಚಿದ್ದಾರೆ. ಸರ್ಕಾರಿ ಶಾಲೆಗಳು ಮತ್ತು ಅಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಿರುವ ಚಿತ್ರ ಇದಾಗಿದೆ.

ಈ ಬಾರಿಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಶಿವಲಿಂಗೇ ಗೌಡ ಜೆಡಿಎಸ್​ ಪಕ್ಷ ತೊರೆದು ಕಾಂಗ್ರೆಸ್​ ಸೇರ್ಪಡೆಯಾಗಿದ್ದರು. ಬಳಿಕ ಚುನಾವಣೆಯಲ್ಲಿ ಭಾರಿ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು. ಈ ಮೂಲಕ ಅರಸೀಕೆರೆ ಕ್ಷೇತ್ರದಲ್ಲಿ ಸತತ ಹ್ಯಾಟ್ರಿಕ್ ಜಯ ಬಾರಿಸಿದ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ರಾಜೀವ್ ಅಭಿನಯದ ಉಸಿರೇ ಉಸಿರೇ ಚಿತ್ರಕ್ಕೆ ಸಿಕ್ತು ಅಭಿನಯ ಚಕ್ರವರ್ತಿಯ ಅಭಯಹಸ್ತ   

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.