ಬೆಂಗಳೂರು ಕಂಬಳ: ಚಿನ್ನದ ಪದಕ ಪಡೆದ 'ಕಾಂತಾರ ಕೋಣಗಳು' - Kantara 1
🎬 Watch Now: Feature Video
Published : Nov 26, 2023, 6:14 PM IST
ಅರಮನೆ ಅಂಗಳದಲ್ಲಿ ''ಬೆಂಗಳೂರು ಕಂಬಳ 2023'' ಜರುಗುತ್ತಿದೆ. ಅಂತಿಮ ವಿಜೇತ ಕೋಣಗಳ ಹೆಸರು ಇನ್ನಷ್ಟೇ ಘೋಷಣೆ ಆಗಬೇಕಿದೆ. ಆದ್ರೆ, ವಿಭಾಗವೊಂದರಲ್ಲಿ 'ಕಾಂತಾರ ಕೋಣಗಳು' ಗೆದ್ದು ಬೀಗಿವೆ. ಹೌದು, ಬೊಳಂಬಳ್ಳಿ ಪರಮೇಶ್ವರ್ ಭಟ್ಟರ ಅಪ್ಪು - ಕುಟ್ಟಿ (ಕಾಂತಾರ ಖ್ಯಾತಿಯ ಕೋಣಗಳು) ಎಂಬ ಕೋಣಗಳು 6.5 ಕೋಲು ನೀರು ಚಿಮ್ಮಿಸಿ ಕೆನೆ ಹಲಗೆ ವಿಭಾಗದಲ್ಲಿ ಮೊದಲ ಚಿನ್ನದ ಪದಕ ಪಡೆದಿದೆ. ಈ ಕೋಣಗಳನ್ನು ಕನ್ನಡ ಚಿತ್ರರಂಗ ಕೀರ್ತಿ ಹೆಚ್ಚಿಸಿದ ಕಾಂತಾರ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿತ್ತು. ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವ ಕಂಬಳ ಉತ್ಸವದಲ್ಲಿ ಈ ಕೋಣಗಳು ಪ್ರೇಕ್ಷಕರ ಗಮನ ಸೆಳೆದಿವೆ.
ರಾಷ್ಟ್ರಮಟ್ಟದಲ್ಲಿ ಕರಾವಳಿಯ ಸಂಸ್ಕೃತಿ ಪರಿಚಯಿಸುವ ನಿಟ್ಟಿನಲ್ಲಿ ಎರಡು ದಿನಗಳ ಕಂಬಳ ಉತ್ಸವ ನಡೆದಿದೆ. ಇಂದು ಈ ಕಾರ್ಯಕ್ರಮ ಪೂರ್ಣಗೊಳ್ಳಲಿದೆ. ಅಂತಿಮ ವಿಜೇತ ಕೋಣಗಳ ಹೆಸರು ಇನ್ನೇನು ಕೆಲವೇ ಕ್ಷಣಗಳಲ್ಲಿ ಘೋಷಣೆ ಆಗಲಿದೆ. ಇನ್ನು, ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರ್ ಸಾರಥ್ಯದಲ್ಲಿ 'ಕಾಂತಾರ' ಪ್ರೀಕ್ವೆಲ್ ನಿರ್ಮಾಣವಾಗಲಿರೋ ವಿಚಾರ ನಿಮಗೆ ತಿಳಿದೇ ಇದೆ. ನಾಳೆ(ಸೋಮವಾರ) ಮಧ್ಯಾಹ್ನದ ಹೊತ್ತಿಗೆ 'ಕಾಂತಾರ' ಪ್ರೀಕ್ವೆಲ್ನ ಫಸ್ಟ್ ಲುಕ್ ಅನಾವರಣಗೊಳ್ಳಲಿದೆ.
ಇದನ್ನೂ ಓದಿ: 7 ಭಾಷೆಗಳಲ್ಲಿ 'ಕಾಂತಾರ' ದರ್ಶನ: 100 ಕೋಟಿ ಬಜೆಟ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ಗೆ ಕಾತರ