ದೇಶಾದ್ಯಂತ ಜವಾನ್ ಸದ್ದು: ಚಿತ್ರಮಂದಿರಗಳತ್ತ ಪ್ರೇಕ್ಷಕರ ಸಂಭ್ರಮಾಚರಣೆ - ಹುಚ್ಚೆದ್ದು ಕುಣಿದ ಫ್ಯಾನ್ಸ್! - ವಿಜಯ್ ಸೇತುಪತಿ
🎬 Watch Now: Feature Video
Published : Sep 7, 2023, 5:44 PM IST
ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಜವಾನ್ ಸಿನಿಮಾ ಇಂದು ದೇಶ ಮಾತ್ರವಲ್ಲದೇ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಚಿತ್ರಮಂದಿರಗಳತ್ತ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ಸೇರಿದ್ದಾರೆ. ಇಂದು ಮುಂಜಾನೆಯೇ ಸಿನಿಮಾ ಪ್ರದರ್ಶನ ಪ್ರಾರಂಭಿಸಿದೆ. ಪ್ರತೀ ಶೋಗಳೂ ಕೂಡ ಹೌಸ್ ಫುಲ್.
ಶ್ರೀನಗರದಿಂದ ಹಿಡಿದು ಚೆನ್ನೈವರೆಗಿನ ಚಿತ್ರಮಂದಿಗಳ ಎದುರು ಪಟಾಕಿ ಸಿಡಿಸಿ, ಶಾರುಖ್ ಕೌಟ್ಟ್ಗೆ ಹಾರ ಹಾಕಿ, ಡೋಲು ಸದ್ದಿಗೆ ಸಖತ್ ಸ್ಟೆಪ್ ಹಾಕಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಥಿಯೇಟರ್ ಒಳಗೆ ಶಿಳ್ಳೆ, ಚಪ್ಪಾಳೆಗಳು ಜೋರಾಗಿದ್ದವು. ಮುಂಬೈ, ಜೈಪುರ, ಜಮ್ಮು, ಕೋಲ್ಕತ್ತಾದಂತಹ ಸಿಟಿಗಳಲ್ಲಿನ ಥಿಯೇಟರ್ ದೃಶ್ಯಗಳು ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಸ್ಟಾರ್ ಡಮ್ ಅನ್ನು ಪ್ರದರ್ಶಿಸಿತು. ಈಗಾಗಲೇ ಸಿನಿಮಾ ನೋಡಿರುವ ವೀಕ್ಷಕರು ಚಿತ್ರದ ಕುರಿತು, ಶಾರುಖ್ ನಟನೆ ಮತ್ತು ಅವತಾರಗಳ ಕುರಿತು ಮೆಚ್ಚುಗೆಯ ಮಳೆ ಸುರಿಸಿದ್ದಾರೆ. ಸದ್ಯದ ಪ್ರತಿಕ್ರಿಯೆ ಗಮನಿಸಿದ್ರೆ ಜವಾನ್ ಸಿನಿಮಾ ಪಠಾಣ್ ದಾಖಲೆ ಮುರಿಯುವಂತೆ ತೋರುತ್ತಿದೆ.
ಇದನ್ನೂ ಓದಿ: Jawan celebration: ಚಲೇಯಾ ಹಾಡು ಪ್ರದರ್ಶನವಾಗುತ್ತಿದ್ದಂತೆ ಚಿತ್ರಮಂದಿರದಲ್ಲಿ ಗೆಳತಿಗೆ ಪ್ರಪೋಸ್ - ವಿಡಿಯೋ ನೋಡಿ!
ಎಸ್ಆರ್ಕೆ ಮಾಲೀಕತ್ವದ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ನಿರ್ಮಿಸಿರುವ ಜವಾನ್ ಸಿನಿಮಾಗೆ ದಕ್ಷಿಣದ ನಿರ್ದೇಶಕ ಅಟ್ಲೀ ಆ್ಯಕ್ಷನ್ ಕಟ್ ಹೇಳಿದ್ದಾರೆ. ವಿಜಯ್ ಸೇತುಪತಿ, ನಯನತಾರಾ, ಪ್ರಿಯಾಮಣಿ ಸೇರಿದಂತೆ ಹಲವರು ನಟಿಸಿದ್ದಾರೆ..