ಮಂಡ್ಯ: ಮುತ್ತೆತ್ತರಾಯನ ದರ್ಶನ ಪಡೆದ ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್ಕುಮಾರ್ - ashwini puneeth rajkumar
🎬 Watch Now: Feature Video
ಮಂಡ್ಯ: ಗಂಧದ ಗುಡಿ ಬಿಡುಗಡೆ ನಂತರ ನಾಡಿನ ಹಲವಾರು ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿರುವ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಇಂದು ಬೆಳಗ್ಗೆ ಮುತ್ತತ್ತಿಗೆ ಆಗಮಿಸಿ ಶ್ರೀ ಮುತ್ತೆತ್ತರಾಯನ ದರ್ಶನ ಪಡೆದರು. ಮುತ್ತತ್ತಿಯ ಶ್ರೀ ಆಂಜನೇಯ ಸ್ವಾಮಿ ರಾಜ್ಕುಮಾರ್ ಕುಟುಂಬದ ಆರಾಧ್ಯ ದೈವ. ರಾಜ್ಕುಮಾರ್ ಕಾಲದಿಂದಲೂ ಈ ಕುಟುಂಬಸ್ಥರು ಆಗಾಗ ಮುತ್ತತ್ತಿಗೆ ಭೇಟಿ ನೀಡಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುತ್ತ ಬಂದಿದ್ದಾರೆ. ಅದರಂತೆ ಇಂದು ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಅದಕ್ಕೂ ಮೊದಲು ಹಲಗೂರಿನಲ್ಲಿ ಬಾಬು ಅವರ ಹೋಟೆಲ್ಗೆ ಭೇಟಿ ನೀಡಿ ಚಿಬ್ಲು ಇಡ್ಲಿ ಸವಿದರು. ಅಶ್ವಿನಿ ಅವರ ಜೊತೆ ರಾಘವೇಂದ್ರ ರಾಜ್ಕುಮಾರ್ ಅವರ ಪತ್ರ ಯುವರಾಜ್ ರಾಜಕುಮಾರ್, ನಿರ್ದೇಶಕ ಸಂತೋಷ್ ಆನಂದ್ ರಾವ್ ಸೇರಿದಂತೆ ಹಲವರು ಇದ್ದರು.
Last Updated : Feb 3, 2023, 8:31 PM IST