ಏರ್ಪೋರ್ಟ್ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ತಮನ್ನಾ ಮತ್ತು ವಿಜಯ್.. ಡೇಟಿಂಗ್ ವದಂತಿಗೆ ಪುಷ್ಠಿ - ETV Bharath Kannada news
🎬 Watch Now: Feature Video
ಮುಂಬೈ: ಡೇಟಿಂಗ್ ಮಾಡುತ್ತಿದ್ದಾರೆ ಎಂದು ಗಾಸಿಪ್ನಲ್ಲಿರುವ ಬಾಲಿವುಡ್‌ನ ಜೋಡಿ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಗೋವಾ ರಜೆಯಿಂದ ಮರಳಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ತಮನ್ನಾ ಮತ್ತು ವಿಜಯ್ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಗೋವಾದಲ್ಲಿ ಒಟ್ಟಿಗೆ ಇದ್ದಾರೆ ಎಂದು ವರದಿಗಳಾಗಿದ್ದವು. ಒಟ್ಟಿಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರುವುದು ಈ ಗಾಸಿಪ್ಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ. ತಮನ್ನಾ ಮತ್ತು ವಿಜಯ್ ಡೇಟಿಂಗ್ ವದಂತಿಗಳ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ಈವರೆಗೂ ನೀಡಿಲ್ಲ. ಆದರೆ ಅವರಿಬ್ಬರು ಲಸ್ಟ್ ಸ್ಟೋರೀಸ್ 2 ನಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಅವರ ಡೇಟಿಂಗ್ ಆರಂಭವಾದದ್ದು ಈ ಸಿನಿಮಾದ ಚಿತ್ರೀಕರಣದ ನಂತರವೇ ಎಂದು ಹೇಳಲಾಗ್ತಿದೆ.
Last Updated : Feb 3, 2023, 8:38 PM IST