ಉಜ್ಜಯಿನಿ ಮಹಾಕಾಳೇಶ್ವರನ ಭಸ್ಮಾರತಿಯಲ್ಲಿ ಭಾಗಿಯಾದ ಅಕ್ಷಯ್ ಕುಮಾರ್, ಶಿಖರ್ ಧವನ್ - ಅಕ್ಷಯ್ ಕುಮಾರ್ ಲೇಟೆಸ್ಟ್ ನ್ಯೂಸ್
🎬 Watch Now: Feature Video
Published : Sep 9, 2023, 1:24 PM IST
ಉಜ್ಜಯಿನಿ (ಮಧ್ಯಪ್ರದೇಶ): ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 56ನೇ ವಸಂತಕ್ಕೆ ಕಾಲಿಟ್ಟ ಹಿಂದಿ ಚಿತ್ರರಂಗದ ನಟನಿಗೆ ಎಲ್ಲೆಡೆಯಿಂದ ಶುಭಾಶಯಗಳ ಸಂದೇಶಗಳು ಹರಿದುಬರುತ್ತಿವೆ. ತಮ್ಮನ್ನು ಈ ಮಟ್ಟಿಗೆ ಬೆಳೆಸಿದ, ಸಾಧನೆಗೈಯಲು ಆಶೀರ್ವದಿಸಿದ ಆ ಭಗವಂತನಿಗೆ ಬಹುಬೇಡಿಕೆ ನಟ ಧನ್ಯವಾದ ಅರ್ಪಿಸಿದ್ದಾರೆ.
ಜನ್ಮದಿನ ಹಿನ್ನೆಲೆ ಇಂದು ಮುಂಜಾನೆ ನಟ ಅಕ್ಷಯ್ ಕುಮಾರ್ ಕುಟುಂಬ ಸಮೇತ ಉಜ್ಜಯಿನಿ ಮಹಾಕಾಳೇಶ್ವರನ ಸನ್ನಿಧಿಗೆ ಆಗಮಿಸಿದ್ದರು. ಕ್ರಿಕೆಟಿಗ ಶಿಖರ್ ಧವನ್ ಕೂಡ ತಮ್ಮ ಕುಟುಂಬ ಸದಸ್ಯರೊಂದಿಗೆ ಉಪಸ್ಥಿತರಿದ್ದರು. ವಿಭಿನ್ನ ಕ್ಷೇತ್ರದ ದಿಗ್ಗಜರು ಮಹಾಕಾಲ್ ಭಸ್ಮಾರತಿಯಲ್ಲಿ ಭಾಗಿಯಾಗಿ ದೇವರ ದರ್ಶನ ಪಡೆದರು.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಬಾಲಿವುಡ್ ನಟ ಅಕ್ಷಯ್ ಕುಮಾರ್, ನಮ್ಮ ದೇಶವು ಮತ್ತಷ್ಟು ಬೆಳೆಯಲಿ, ಬಾಬಾರ ಆಶೀರ್ವಾದ ಮುಂದುವರಿಯಲಿ. ದೇಶ ಸಾಕಷ್ಟು ಪ್ರಗತಿ ಹೊಂದಲಿ ಎಂದು ಬೇಡಿಕೊಂಡರು. ಕ್ರಿಕೆಟರ್ ಶಿಖರ್ ಧವನ್ ಮಾತನಾಡಿ, ಮಹಾಕಾಳೇಶ್ವರ ನಮ್ಮನ್ನು ಇಲ್ಲಿಗೆ ಕರೆಸಿಕೊಂಡಿದ್ದಾರೆ, ಅದಕ್ಕೆ ಧನ್ಯವಾದಗಳು ಎಂದು ತಿಳಿಸಿದರು.
ಇದನ್ನೂ ಓದಿ: Chandramukhi 2: ಬಹುನಿರೀಕ್ಷಿತ 'ಚಂದ್ರಮುಖಿ 2' ಬಿಡುಗಡೆ ದಿನಾಂಕ ಮುಂದೂಡಿಕೆ.. 'ಜವಾನ್ ಎಫೆಕ್ಟ್' ಎಂದ ನೆಟ್ಟಿಗರು