ಹಿರಿಯ ನಟಿ ಡಾ.ಲೀಲಾವತಿ ನಿವಾಸಕ್ಕೆ ಉಮಾಶ್ರೀ, ಪದ್ಮಾವಾಸಂತಿ ಭೇಟಿ: ಆರೋಗ್ಯ ವಿಚಾರಣೆ - ಲೀಲಾವತಿ
🎬 Watch Now: Feature Video
ನೆಲಮಂಗಲ (ಬೆಂಗಳೂರು ಗ್ರಾಮಾಂತರ): ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ.ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಕಲಾವಿದರಾದ ಉಮಾಶ್ರೀ ಮತ್ತು ಪದ್ಮಾವಾಸಂತಿ ಅವರು, ಹಿರಿಯ ನಟಿ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ನೆಲಮಂಗಲದ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ಲೀಲಾವತಿ ಅವರು ತಮ್ಮ ಮಗ ವಿನೋದ್ ರಾಜ್ ಜೊತೆ ವಾಸವಾಗಿದ್ದಾರೆ. 80ರ ವಯೋಮಾನದ ಲೀಲಾವತಿಯವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರ ಆರೋಗ್ಯ ವಿಚಾರಿಸಲು ಚಿತ್ರರಂಗದ ನಟ - ನಟಿಯರು ಅವರ ತೋಟದ ಮನೆಗೆ ಭೇಟಿ ಕೊಡುತ್ತಿದ್ದಾರೆ. ಇದೀಗ ನಟಿಯರಾದ ಉಮಾಶ್ರೀ ಹಾಗೂ ಪದ್ಮಾವಾಸಂತಿ ಕೂಡ ಲೀಲಾವತಿಯವರ ಮನೆಗೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿದ್ದಾರೆ.
ಉಮಾಶ್ರೀಯವರನ್ನು ನೋಡಿ ಖುಷಿಪಟ್ಟ ಹಿರಿಜೀವ ಅವರಿಗಾಗಿ 'ಒಲವಿನ ಪ್ರಿಯ ಲತೆ ಅವಳದೇ ಚಿಂತೆ' ಎಂಬ ಹಾಡನ್ನು ಕೂಡ ಹಾಡಿದರು. ಕೆಲವು ಸಮಯ ಅವರೊಂದಿಗೆ ಹಾಡು ಹರಟೆ ಹೊಡೆದು ಖುಷಿಪಟ್ಟರು. ಇನ್ನು ಪದ್ಮಾವಾಸಂತಿ ಅವರು ಲೀಲಾವತಿ ಅವರ ಜೊತೆ ಚಪ್ಪಾಳೆ ಆಟ ಆಡುವ ಮೂಲಕ ಅವರ ಮನಸನ್ನು ಮುದಗೊಳಿಸಿದರು.
ಇದನ್ನೂ ಓದಿ: ರಾಘವೇಂದ್ರ ರಾಜ್ಕುಮಾರ್ ನಟನೆಯ '13' ಸಿನಿಮಾದ ಸಿಂಗಲ್ ಸೇವಂತಿ ಐಟಂ ಸಾಂಗ್ ರಿಲೀಸ್