'ಡಂಕಿ' ಬಿಡುಗಡೆಗೆ ದಿನಗಣನೆ: ಮಗಳೊಂದಿಗೆ ಶಿರಡಿ ಸಾಯಿಬಾಬಾರ ದರ್ಶನ ಪಡೆದ ನಟ ಶಾರುಖ್ ಖಾನ್ - ಈಟಿವಿ ಭಾರತ ಕನ್ನಡ
🎬 Watch Now: Feature Video
Published : Dec 14, 2023, 7:01 PM IST
ಶಿರಡಿ (ಮಹಾರಾಷ್ಟ್ರ): ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಅಭಿನಯದ 'ಡಂಕಿ' ಸಿನಿಮಾ ಇದೇ ಡಿಸೆಂಬರ್ 21ರಂದು ತೆರೆಗಪ್ಪಳಿಸಲಿದೆ. ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಪ್ರಚಾರ ಜೋರಾಗಿಯೇ ನಡೆಯುತ್ತಿದೆ. ಶಾರುಖ್ ಖಾನ್ ತಮ್ಮ ಸಿನಿಮಾಗಳ ಬಿಡುಗಡೆಗೂ ಮುನ್ನ ದೇಗುಲಗಳಿಗೆ ಭೇಟಿ ನೀಡುತ್ತಾರೆ. ಅದರಂತೆ ಇಂದು ತಮ್ಮ ಪುತ್ರಿ ಸುಹಾನಾ ಖಾನ್ ಜೊತೆ ಶಿರಡಿಯ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಶಿರಡಿಯಲ್ಲಿ ಎಸ್ಆರ್ಕೆ ಕಾಣಿಸಿಕೊಂಡಿರುವ ವಿಡಿಯೋಗಳು ಸದ್ಯ ವೈರಲ್ ಆಗುತ್ತಿದೆ.
ಸಾಯಿಬಾಬಾರ ದರ್ಶನಕ್ಕೆ ಬರುವಾಗ ಸುಹಾನಾ ಖಾನ್ ಸಾಂಪ್ರದಾಯಿಕ ಗ್ರೀನ್ ಸೂಟ್ ಮತ್ತು ಅದಕ್ಕೆ ಹೊಂದುವ ದುಪ್ಪಟ್ಟ ಧರಿಸಿದ್ದರು. ಶಾರುಖ್ ಖಾನ್ ಬಿಳಿ - ಟಿ ಶರ್ಟ್, ಡೆನಿಮ್ಸ್ ಮತ್ತು ಜಾಕೆಟ್ನಲ್ಲಿ ಕಾಣಿಸಿಕೊಂಡರು. ನಟ ಕ್ಯಾಪ್ ಮತ್ತು ಕೂಲಿಂಗ್ ಗ್ಲಾಸ್ ಕೂಡ ಧರಿಸಿದ್ದರು. ಈ ವೇಳೆ, ಸ್ಟಾರ್ಸ್ಗಾಗಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿತ್ತು. ನಟನೊಂದಿಗೆ ಮ್ಯಾನೇಜರ್ ಪೂಜಾ ದದ್ಲಾನಿ ಕೂಡ ಇದ್ದರು. ಕೆಲವು ದಿನಗಳ ಹಿಂದೆಯಷ್ಟೇ ಕಿಂಗ್ ಖಾನ್, ಜಮ್ಮುವಿನ ಕತ್ರಾದಲ್ಲಿರುವ ವೈಷ್ಣೋದೇವಿ ದೇಗುಲದಲ್ಲಿ ಕಾಣಿಸಿಕೊಂಡಿದ್ದರು.
'ಡಂಕಿ' ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ಬೊಮನ್ ಇರಾನಿ, ತಾಪ್ಸಿ ಪನ್ನು, ವಿಕ್ಕಿ ಕೌಶಲ್, ವಿಕ್ರಮ್ ಕೊಚ್ಚರ್ ಮತ್ತು ಅನಿಲ್ ಗ್ರೋವರ್ ಕೂಡ ನಟಿಸಿದ್ದಾರೆ. ಸಿನಿಮಾ ಇದೇ ಡಿಸೆಂಬರ್ 21ರಂದು ತೆರೆಗಪ್ಪಳಿಸಲಿದೆ. ಇದೇ ವರ್ಷ ತೆರೆಕಂಡ ಜವಾನ್, ಪಠಾಣ್ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿದ್ದು, 'ಡಂಕಿ' ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಹ್ಯಾಟ್ರಿಕ್ ಹಿಟ್ಗಾಗಿ ಶಾರುಖ್ ಖಾನ್ ಕಾಯುತ್ತಿದ್ದಾರೆ.
ಇದನ್ನೂ ಓದಿ: ವಿದೇಶಗಳಲ್ಲಿ 'ಡಂಕಿ' ಅಡ್ವಾನ್ಸ್ ಬುಕ್ಕಿಂಗ್ ಓಪನ್; ಭಾರತದಲ್ಲಿ ಯಾವಾಗ? ಇಲ್ಲಿದೆ ಮಾಹಿತಿ