thumbnail

By

Published : Apr 27, 2023, 12:15 PM IST

ETV Bharat / Videos

ನಟಿ ಸಮಂತಾಳ ಸಮಾಜಮುಖಿ ಕಾರ್ಯ ಮೆಚ್ಚಿ ದೇವಾಲಯ ಕಟ್ಟಿಸಿದ ಅಭಿಮಾನಿ

ಬಾಪಟ್ಲಾ (ಆಂಧ್ರಪ್ರದೇಶ): ಸೌತ್​ ಬ್ಯೂಟಿ ಸಮಂತಾ ರುತ್​ ಪ್ರಭು ತಮ್ಮ ನಟನೆಯಿಂದಲೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಜೊತೆಗೆ ಅವರ ಸಮಾಜಮುಖಿ ಕಾರ್ಯಗಳಿಗೂ ಮನಸೋತವರು ಅನೇಕರು ಇದ್ದಾರೆ. ಇದೀಗ ಅಂತಹ ಅಭಿಮಾನಿಯೊಬ್ಬರು ಸಮಂತಾ ಅವರಿಗಾಗಿ ದೇವಸ್ಥಾನವನ್ನು ನಿರ್ಮಿಸುತ್ತಿದ್ದಾರೆ. 

ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ಚುಂಡೂರು ತಾಲೂಕಿನ ಆಲಪಾಡು ಮೂಲದ ಸಂದೀಪ್​ ಎಂಬವರಿಗೆ ಸಮಂತಾ ಅವರ ಮೇಲೆ ವಿಶೇಷ ಪ್ರೀತಿ. ಅವರ ನಟನೆಯ ಜೊತೆಗೆ ಸಮಾಜ ಸೇವೆಗೆ ದೊಡ್ಡ ಅಭಿಮಾನಿ. ಪ್ರತ್ಯೂಷಾ ಫೌಂಡೇಶನ್ ಮೂಲಕ ಅದೆಷ್ಟೋ ಅನಾರೋಗ್ಯ ಪೀಡಿತ ಮಕ್ಕಳಿಗೆ ಮರುಜನ್ಮ ನೀಡಿದ ಸಮಂತಾ ಅವರ ಮೇಲಿನ ಗೌರವ ಇಮ್ಮಡಿಗೊಂಡಿದೆ. ಹೀಗಾಗಿ ಅವರು ಸಮಂತಾಳಿಗಾಗಿ ದೇವಾಲಯವನ್ನು ನಿರ್ಮಿಸಲು ನಿರ್ಧರಿಸಿದ್ದಾರೆ. 

ಸಂದೀಪ್​ ತಮ್ಮ ಮನೆಯ ಆವರಣದಲ್ಲಿ ಸಣ್ಣ ದೇವಾಲಯವನ್ನು ಕಟ್ಟಿದ್ದಾರೆ. ಸಮಂತಾ ಅವರ ವಿಗ್ರಹವನ್ನೂ ಮಾಡಿಸಿದ್ದಾರೆ.  ಸದ್ಯ ಮೂರ್ತಿ ಹಾಗೂ ದೇವಾಲಯಕ್ಕೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಇದೇ 28 ರಂದು ದೇವಸ್ಥಾನ ತೆರೆಯಲಾಗುವುದು. ಇದುವರೆಗೂ ಸಮಂತಾ ಅವರನ್ನು ನಾನು ನೇರವಾಗಿ ನೋಡಿಲ್ಲ. ಆದರೆ ಅವರ ಮೇಲಿನ ಅಭಿಮಾನದಿಂದ ಈ ದೇವಸ್ಥಾನವನ್ನು ಕಟ್ಟಿದ್ದೇನೆ ಎಂದು ಸಂದೀಪ್​ ತಿಳಿಸಿದ್ದಾರೆ.

ಇದನ್ನೂ ಓದಿ: ಕನಸುಗಾರ ರವಿಚಂದ್ರನ್ ಸುಪುತ್ರನ ಸಿನಿಮಾ ಶೀರ್ಷಿಕೆ ಅನಾವರಣ: ಕ್ಯಾಚಿ ಟೈಟಲ್​ನೊಂದಿಗೆ ಬಂದ ವಿಕ್ರಮ್

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.