ಖಾರ್ಕೀವ್ನಿಂದ ದೇಶಕ್ಕೆ ಆಗಮಿಸಿದ ರೋಚಕ ಕಹಾನಿ ಬಿಚ್ಚಿಟ್ಟ ದಾವಣಗೆರೆಯ ವಿನಯ್ - ರಷ್ಯಾ ಉಕ್ರೇನ್ ಯುದ್ಧ
🎬 Watch Now: Feature Video
ದಾವಣಗೆರೆ: ಉಕ್ರೇನ್ ವೈದ್ಯಕೀಯ ಕಾಲೇಜ್ನಲ್ಲಿ ಓದುತ್ತಿದ್ದ ದಾವಣಗೆರೆಯ ಎಲ್ಐಸಿ ಕಾಲೋನಿ ನಿವಾಸಿ ವಿನಯ್ ಕಲ್ಲಿಹಾಳ್ ಸುರಕ್ಷಿತವಾಗಿ ಮನೆಗೆ ಬಂದಿದ್ದಾರೆ. ಯುದ್ಧದ ಕಾರ್ಮೋಡದಿಂದ ದಾವಣಗೆರೆಗೆ ತಲುಪಿದ ವಿನಯ್ ಕಲ್ಲಿಹಾಳ್ಗೆ ಪೋಷಕರು ಸಿಹಿ ತಿನಿಸಿ ಸಂತಸದಿಂದ ಬರಮಾಡಿಕೊಂಡರು. ಉಕ್ರೇನ್ ಸ್ಥಿತಿಗತಿಯ ಕುರಿತು ಈಟಿವಿ ಭಾರತದೊಂದಿಗೆ ಅಭಿಪ್ರಾಯ ಹಂಚಿಕೊಂಡ ವಿನಯ್, ಅಲ್ಲಿನ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ನಮಗೆ ಬಾಂಬ್ ಸ್ಫೋಟದ ಸೌಂಡ್ ಕೇಳಿಸುತ್ತಿತ್ತು. ಭಾರತೀಯ ರಾಯಭಾರ ಕಚೇರಿಯವರು ನಮಗೆ ಸಹಾಯ ಮಾಡಿದರು. ನಮಗೆ ಗಡಿ ಭಾಗದಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಿದ್ದರು ಎಂದರು.
Last Updated : Feb 3, 2023, 8:18 PM IST