ಉಕ್ರೇನ್ನಲ್ಲಿ ಹಾವೇರಿ ವಿದ್ಯಾರ್ಥಿ ಸಾವಿನ ಬಗ್ಗೆ ಪ್ರತಿಕ್ರಿಯಿಸುವಾಗ ಭಾವುಕರಾದ ಸಿಎಂ
🎬 Watch Now: Feature Video
ಬೆಂಗಳೂರು: ಉಕ್ರೇನ್ ದೇಶದ ಖಾರ್ಕಿವ್ನಲ್ಲಿ ನಡೆದ ಭೀಕರ ದಾಳಿಯಲ್ಲಿ ಕರ್ನಾಟಕದ ಹಾವೇರಿಯ ಮೆಡಿಕಲ್ ವಿದ್ಯಾರ್ಥಿ ನವೀನ್ ಶೇಖರಪ್ಪ ಗ್ಯಾನಗೌಡರ್(21) ಸಾವನ್ನಪ್ಪಿದ್ದು, ಈ ವಿಚಾರವಾಗಿ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡುತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕರಾದರು. ಒಂದು ವಾರದಿಂದ ಬಂಕರ್ನಲ್ಲಿದ್ದ ನವೀನ್ ಹಾಗೂ ಆತನ ಇಬ್ಬರು ಸ್ನೇಹಿತರು ಇಂದು ರೈಲ್ವೇ ಸ್ಟೇಷನ್ ಮೂಲಕ ಆಚೆ ಬಂದು ಇತರರನ್ನು ಸೇರಿಕೊಳ್ಳಬೇಕು ಎಂಬುವಷ್ಟರಲ್ಲಿ ಶೆಲ್ ದಾಳಿ ನಡೆದಿದೆ. ಈ ವೇಳೆ ನವೀನ್ ಸಾವನ್ನಪ್ಪಿದ್ರೆ, ಅದೇ ಗ್ರಾಮದ ಮತ್ತೋರ್ವ ವಿದ್ಯಾರ್ಥಿ ಗಾಯಗೊಂಡಿದ್ದಾನೆ. ಈ ವಿಚಾರವಾಗಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಸಂಪರ್ಕದಲ್ಲಿರುವುದಾಗಿ ಸಿಎಂ ತಿಳಿಸಿದರು.
Last Updated : Feb 3, 2023, 8:18 PM IST