ಅಥಣಿಯಲ್ಲಿ ಭಾರಿ ಮಳೆಗೆ ಶ್ರೀಯಲ್ಲಮ್ಮದೇವಿಯ ದೇವಸ್ಥಾನ ಜಲಾವೃತ - belgum news
🎬 Watch Now: Feature Video
ಅಥಣಿ:ತಾಲೂಕಿನಲ್ಲಿ ಮೂರುದಿನಗಳಿಂದ ಸುರಿದ ಭಾರಿ ಮಳೆಗೆ ಯಲ್ಲಮವಾಡಿ ಕೆರೆ ತುಂಬಿ, ಶ್ರೀಯಲ್ಲಮ್ಮ ದೇವಿ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ. ಇದರಿಂದ ಸಾವಿರಾರು ಭಕ್ತರಿಗೆ ದೇವಿಯ ದರ್ಶನ ಭಾಗ್ಯ ಸಿಗುತ್ತಿಲ್ಲ. ಅಷ್ಟೇ ಅಲ್ಲ, ಕೋಹಳ್ಳಿ ಕೋಕಟನೂರ, ಅಡಹಳ್ಳಟ್ಟಿ, ಐಗಳಿ ಕಟಗೇರಿ, ಬಡಚಿ ಗ್ರಾಮಗಳಲ್ಲೂ ಮಳೆ ಬಿಡದೆ ಸುರಿಯುತ್ತಿದೆ. ಯಲ್ಲಮ್ಮದೇವಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅಲ್ಲಿರುವ ಅರ್ಚಕ ರಾಹುಲ್ ಪೂಜಾರಿ, ನೀರಿನ ಪ್ರಮಾಣ ನಾಳೆ ಕಡಿಮೆಯಾಗುತ್ತದೆ. ದೇವಿಯ ದರ್ಶನಕ್ಕೆ ನಾಳೆ ಅವಕಾಶ ಸಿಗಲಿದೆ ಎಂದು ತಿಳಿಸಿದ್ದಾರೆ.