ನಾಡಿಗೆ ಲಗ್ಗೆ ಇಟ್ಟ ಕಾಡಾನೆ ಹಿಂಡು: ರೈತರ ಬೆಳೆ ನಾಶ - Wild Elephant herd entre to urban area
🎬 Watch Now: Feature Video
ಮೈಸೂರು: ಕಾಡಾನೆ ಹಿಂಡು ನಾಡಿಗೆ ನುಗ್ಗಿ ರೈತರ ಬೆಳೆ ನಾಶ ಮಾಡಿರುವ ಘಟನೆ ನಂಜನಗೂಡು ತಾಲೂಕಿನ ಮಾಲ್ಗುಡಿಯಲ್ಲಿ ನಡೆದಿದೆ. ಮಾಲ್ಗುಡಿ ಸಮೀಪದ ಕಸುವಿನಹಳ್ಳಿ, ಸಿದ್ದಯ್ಯನ ಹುಂಡಿ, ಮಾಕನಪುರ, ದೇಪೇಗೌಡನಪುರ, ಮಲ್ಲಳ್ಳಿ, ಕೆಲ್ಲೂಪುರ ಗ್ರಾಮದ ಜಮೀನುಗಳಿಗೆ 10ರಿಂದ 15 ಕಾಡಾನೆಗಳ ಗುಂಪು ನುಗ್ಗಿ ರೈತರು ಬೆಳೆದ 30 ಎಕರೆ ಬಾಳೆ, ಟೊಮ್ಯಾಟೊ ಫಸಲುಗಳನ್ನ ನಾಶ ಮಾಡಿವೆ. ಈ ಬಗ್ಗೆ ರೈತರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳ ವಿರುದ್ಧ ರೈತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ನಾಶವಾದ ಬೆಳೆಗೆ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.