ಮಹಿಳಾ ದಿನಾಚರಣೆ ಪ್ರಯುಕ್ತ ತೃತೀಯಲಿಂಗಿಗಳಿಗೆ ಸನ್ಮಾನ - shviamogga woman's day
🎬 Watch Now: Feature Video
ಶಿವಮೊಗ್ಗ : ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ರಾಜ್ಯ ಚಾಣುಕ್ಯ ಸೇನೆ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ ಹಾಗೂ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ತೃತೀಯ ಲಿಂಗಿಗಳಿಗೆ ಸನ್ಮಾನ ಮಾಡುವ ಮೂಲಕ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ತೃತೀಯ ಲಿಂಗಿ ವೈಷ್ಣವಿ ಮಾತನಾಡಿ, ನಮ್ಮನ್ನ ಸಮಾಜ ಈ ಹಿಂದೆ ಬೇರೆ ದೃಷ್ಟಿಯಿಂದ ನೋಡುತ್ತಿತ್ತು. ಈಗ ಎಲ್ಲರೂ ನಮ್ಮನ್ನು ಗೌರವಿಸುತ್ತಿದ್ದಾರೆ. ತಮ್ಮ ಅಕ್ಕ, ತಂಗಿಯರಂತೆ ನಮ್ಮನ್ನು ನೋಡಿ ಗೌರವಿಸಿ ಸನ್ಮಾನಿಸುತ್ತಿರುವುದು ಸಂತಸವಾಗಿದೆ ಎಂದರು. ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಬಹುಮಾನ ಪಡೆದ ಇಬ್ಬರು ಯುವತಿಯರನ್ನು ಸಹ ಸನ್ಮಾನಿಸಲಾಯಿತು.