Watch: ರಿಯಲ್ ಹೀರೋಗೆ ಬಂಟ್ವಾಳದ ಅಭಿಮಾನಿಯ ವಿಶೇಷ ಕೃತಜ್ಞತೆ ಹೀಗಿತ್ತು.. - ಸೋನು ಸೂದ್ ಅಭಿಮಾನಿ ವಿಶೇಷ ಕಾರ್
🎬 Watch Now: Feature Video

ಮನುಷ್ಯನ ಕಷ್ಟಕಾಲಕ್ಕೆ ಮನುಷ್ಯನೇ ಆಗಬೇಕು. ಕೋವಿಡ್ ಕಾಲದಲ್ಲಂತೂ ಉಳ್ಳವರು ಇಲ್ಲದವರ ಸಹಾಯಕ್ಕೆ ಮುಂದಾಗ್ತಿರೋ ನಿದರ್ಶನಗಳು ಸಾಕಷ್ಟಿವೆ. ಇಂಥ ಮಾನವೀಯ ಗುಣ ಹೊಂದಿರುವ ಜನರಲ್ಲಿ ಬಾಲಿವುಡ್ ನಟ ಸೋನು ಸೂದ್ ಹೆಸರು ವಿಶೇಷವಾದದ್ದು. ಕೋವಿಡ್ ಕಾಲದಲ್ಲಿ ಸಂಕಷ್ಟದಲ್ಲಿದ್ದ ಮಂದಿಗೆ ಮಿಡಿದ ಹೃದಯವಿದು. ನೊಂದವ್ರ ಪಾಲಿಗೆ ಇವ್ರೇ ರಿಯಲ್ ಹೀರೋ. ನಿಜಜೀವನದ ಈ ಹೀರೋಗೆ ಬಂಟ್ವಾಳದ ಅಭಿಮಾನಿಯೊಬ್ಬ ಅವರ ಸಮಾಜಮುಖಿ ಕಾರ್ಯಗಳನ್ನು ಸಾರುವ ಫೋಟೋ, ಲೇಖನಗಳನ್ನು ತಮ್ಮ ವಾಹನಕ್ಕೆ ಅಂಟಿಸುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.