ಕೊರೊನಾ ಭೀತಿ: ಬೆಳಗಾವಿಯಲ್ಲಿ ಆರು ಸಾವಿರ ಕೋಳಿಗಳ ಜೀವಂತ ಸಮಾಧಿ! - ಆರು ಸಾವಿರ ಕೋಳಿಗಳ ಜೀವಂತ ಸಮಾಧಿ
🎬 Watch Now: Feature Video
ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಲೋಳಸುರ ಗ್ರಾಮದಲ್ಲಿ ಆರು ಸಾವಿರ ಕೋಳಿಗಳನ್ನು ಜೀವಂತ ಸಮಾಧಿ ಮಾಡಲಾಗಿದೆ. ಲೋಳಸುರ ಗ್ರಾಮದ ನಜೀರ್ ಮಕಾಂದರ್ ಎಂಬುವವರು ಕೋಳಿ ಫಾರ್ಮ್ ಮಾಡಿದ್ದರು. ಅಲ್ಲಿ ಆರು ಸಾವಿರ ಕೋಳಿಗಳನ್ನು ಸಾಕಲಾಗಿತ್ತು. ಕೊರೊನಾ ಭೀತಿ ಹಿನ್ನೆಲೆಯಲ್ಲಿ ನಜೀರ್ ಮಕಾಂದಾರ್ ತಮ್ಮ ಜಮೀನಿನಲ್ಲಿ ಜೆಸಿಬಿಯಿಂದ ಗುಂಡಿ ತೋಡಿ ಫಾರ್ಮ್ನಲ್ಲಿದ್ದ ಎಲ್ಲಾ ಕೋಳಿಗಳನ್ನು ಜೀವಂತ ಸಮಾಧಿ ಮಾಡಿದ್ದಾರೆ.
TAGGED:
ಆರು ಸಾವಿರ ಕೋಳಿಗಳ ಜೀವಂತ ಸಮಾಧಿ