ಜಿಲ್ಲಾಡಳಿತದಿಂದ ನಿರ್ಲಕ್ಷ್ಯ ಆರೋಪ: ಅಗತ್ಯ ವಸ್ತುಗಳಿಗಾಗಿ ಜನರ ಪರದಾಟ - ಹುಬ್ಬಳ್ಳಿ ಲಾಕ್ಡೌನ್ ನ್ಯೂಸ್
🎬 Watch Now: Feature Video
ಹುಬ್ಬಳ್ಳಿ: ಲಾಕ್ಡೌನ್ ಹಿನ್ನೆಲೆ ಅಗತ್ಯ ವಸ್ತುಗಳಿಗಾಗಿ ಜನರು ಪರದಾಟ ನಡೆಸಿರುವ ಘಟನೆ ಹುಬ್ಬಳ್ಳಿಯ ರಾಮನಗರದ ತಾರಿಹಾಳ ಆಶ್ರಯ ಕಾಲೋನಿಯಲ್ಲಿ ನಡೆದಿದೆ. ಎರಡನೇ ಹಂತದ ವಾರ್ಡ್ ಸಂಖ್ಯೆ 37 ರಲ್ಲಿರುವ ನಾಗರಿಕರು ಕಳೆದ ಒಂದು ತಿಂಗಳಿಂದ ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇಲ್ಲಿಯ ಜನರಿಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಯಾವುದೇ ಸೌಲಭ್ಯ ನೀಡಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಕೈಯ್ಯಲ್ಲಿ ದುಡ್ಡಿಲ್ಲ, ದುಡಿದು ತಿನ್ನಲು ಕೆಲಸವಿಲ್ಲ. ಹೀಗಾಗಿ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಜಿಲ್ಲಾಡಳಿತ ನಮಗೆ ಕನಿಷ್ಟ ಮೂಲ ಸಾಮಗ್ರಿಗಳನ್ನು ಒದಗಿಸಬೇಕು ಎಂದು ಜನತೆ ಅಳಲು ತೋಡಿಕೊಳ್ಳುತ್ತಿದ್ದಾರೆ.