ಚಿಕ್ಕೋಡಿಯಲ್ಲಿ ಯಾರಲ್ಲೂ ಕೊರೊನಾ ಪತ್ತೆಯಾಗಿಲ್ಲ: ಡಾ.ಸಂತೋಷ ಕೊಣ್ಣುರಿ ಸ್ಪಷ್ಟನೆ - ಚಿಕ್ಕೋಡಿಯಲ್ಲಿ ಯಾರಲ್ಲೂ ಕೊರೊನಾ ಪತ್ತೆಯಾಗಿಲ್ಲ: ಡಾ.ಸಂತೋಷ ಕೊಣ್ಣುರಿ ಸ್ಪಷ್ಟನೆ
🎬 Watch Now: Feature Video
ಚಿಕ್ಕೋಡಿ ಪಟ್ಟಣದ ನಿವಾಸಿಯೊಬ್ಬರು ಕಳೆದ ನಾಲ್ಕು ದಿನಗಳ ಹಿಂದೆ ತಮ್ಮ ದುಬೈ ಪ್ರವಾಸ ಮುಗಿಸಿ ಬಂದಿದ್ದಾರೆ. ಮಾಹಿತಿ ತಿಳಿದ ಚಿಕ್ಕೋಡಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ತಕ್ಷಣ ಅವರ ಮನೆಗೆ ಭೇಟ್ಟಿ ನೀಡಿ ತಪಾಸಣೆ ನಡೆಸಿದ್ದು, ಅವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿಲ್ಲ. ಹಾಗಾಗಿ ಚಿಕ್ಕೋಡಿ ಯಾರಲ್ಲೂ ಕೊರೊನಾ ಸೋಂಕು ಪತ್ತೆಯಾಗಿಲ್ಲ ಎಂದು ಮುಖ್ಯ ವೈದ್ಯಾಧಿಕಾರಿ ಸಂತೋಷ ಕೊಣ್ಣುರಿ ತಿಳಿಸಿದ್ದಾರೆ. ಇನ್ನು ಮುಂಜಾಗ್ರತ ಕ್ರಮವಾಗಿ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ 6 ಐಸಿಯು ವಾರ್ಡ್ಗಳನ್ನು ತೆರೆಯಲಾಗಿದ್ದು, ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ಆರೋಗ್ಯ ಸಿಬ್ಬಂದಿಗಳಿಂದ ಜಾಗೃತಿ ಅಭಿಯಾನ ನಡಸಲಾಗುವುದು ಎಂದು ತಿಳಿಸಿದರು.