ಹಾಡಿನ ಮೂಲಕ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ ಹುಬ್ಬಳ್ಳಿ ಹೈದರು - ಹಾಡಿನ ಮೂಲಕ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ ಹುಬ್ಬಳ್ಳಿ ಕಲಾವಿದರು
🎬 Watch Now: Feature Video
ಹುಬ್ಬಳ್ಳಿ: ಕೊರೊನಾ ವೈರಸ್ ಬಗ್ಗೆ ಸರ್ಕಾರ ಎಲ್ಲ ರೀತಿಯ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಕೂಡ ಇಂತಹ ಜಾಗೃತಿ ಅಭಿಯಾನಗಳಿಗೆ ಸ್ಪಂದಿಸುತ್ತಿದ್ದಾರೆ. ಇಲ್ಲೊಬ್ಬ ಕಲಾವಿದ ಹಾಡಿನ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹುಬ್ಬಳ್ಳಿಯ ಮಂಜುನಾಥ ಭೈರಿದೇವರಕೊಪ್ಪ ಹಾಗೂ ಸದಾನಂದ ಭೈರಿದೇವರಕೊಪ್ಪ ಎಂಬುವರು ಒಳಿತು ಮಾಡು ಮನುಷ ನಿನಿರೋದು ಮೂರು ದಿವಸ ಎಂಬುವಂತ ರಾಗದಲ್ಲಿ ಕೊರೊನಾ ವೈರಸ್ ಬಗ್ಗೆ ಜನರು ಅನುಸರಿಸಬೇಕಾದ ಆರೋಗ್ಯದ ಕ್ರಮಗಳ ಬಗ್ಗೆ ಹಾಡಿನ ಮೂಲಕ ತಿಳಿಸಿದ್ದಾರೆ. ಸಾಹಿತ್ಯವನ್ನು ಸದಾನಂದ ಭೈರಿದೇವರಕೊಪ್ಪ ರಚಿಸಿದ್ದು, ಮಂಜುನಾಥ ಭೈರಿದೇವರಕೊಪ್ಪ ಧ್ವನಿ ನೀಡಿದ್ದಾರೆ.