ಮಳೆಯಿಂದ ದ್ವೀಪದಂತಾದ ಅಡಿಕೆ ತೋಟ: ದಾವಣಗೆರೆ ರೈತರು ಕಂಗಾಲು - ದಾವಣಗೆರೆ ರೈತರು ಕಂಗಾಲು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-13593707-thumbnail-3x2-news.jpg)
ದಾವಣಗೆರೆ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ, ಕಟ್ಟೆಗಳು ತುಂಬಿ ಅಡಿಕೆ ತೋಟಗಳಿಗೆ ನೀರು ನುಗ್ಗಿದೆ. ಇಡೀ ತೋಟವೇ ದ್ವೀಪದಂತಾಗಿದ್ದು, ರೈತರು ಕಂಗಾಲಾಗಿದ್ದಾರೆ. ದಾವಣಗೆರೆ (Davangere) ತಾಲೂಕಿನ ಮಲ್ಲಶೆಟ್ಟಿ ಹಳ್ಳಿಯಲ್ಲಿರುವ ಕೆರೆ ತುಂಬಿದ್ದರಿಂದ 4 ಎಕರೆ ಅಡಿಕೆ ತೋಟ ಸಂಪೂರ್ಣ ಜಲಾವೃತವಾಗಿದೆ. ಇಷ್ಟು ಅವಾಂತರ ಸೃಷ್ಟಿಯಾಗಿದ್ದರೂ ಕೂಡ ಯಾವೊಬ್ಬ ಅಧಿಕಾರಿಯೂ ಬಂದು ಪರಿಶೀಲನೆ ನಡೆಸದೇ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ತೋಟದಲ್ಲಿ ನೀರು ನಿಂತಿರುವುದರಿಂದ ಅಡಿಕೆ ಗಿಡಗಳು ನೆಲಕಚ್ಚುವ ಹಂತ ತಲುಪಿವೆ. ತೆಂಗು, ಮೆಕ್ಕೆಜೋಳ, ಕೂಡ ನೀರು ಪಾಲಾಗಿದೆ ಎಂದು ಮಲ್ಲಶೆಟ್ಟಿ ಹಳ್ಳಿ ರೈತ ರಾಜೇಶ್ ಎಂಬುವವರು ತಮ್ಮ ಅಳಲು ತೋಡಿಕೊಂಡರು.