ನನಗೆ ಅವಕಾಶ ಕೊಟ್ಟು ನೋಡಿ, ಉಗ್ರರ ಹುಟ್ಟಡಗಿಸುವೆ... ಮೋದಿಗೆ ಚಾನ್ಸ್ ಕೇಳಿದ ಶಂಕರ್ ಬಿದರಿ - news kannada
🎬 Watch Now: Feature Video
ಬೆಂಗಳೂರು: ಯೋಧರ ಮೇಲಿನ ಉಗ್ರರ ದಾಳಿಯನ್ನು ಖಂಡಿಸಿ ಎಲ್ಲೇಡೆ ಆಕ್ರೋಶ ಕೇಳಿ ಬರುತ್ತಿದೆ. ಇನ್ನು ಈ ದಾಳಿಗೆ ಸಂಬಂಧಿಸಿ ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಅವರು ಕೂಡ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ನನಗೆ 64 ವರ್ಷ ವಯಸ್ಸು, ನೀವು ಇವಾಗ್ಲು ನನಗೆ ಅವಕಾಶ ಕೊಟ್ರೆ ನಾನು ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಲು ಸಿದ್ಧ. ನನ್ನ ಜೀವ ಹೋದರೂ ಪರವಾಗಿಲ್ಲ, ಕಳಿಸಿಕೊಡಿ ಎಂದು ಪ್ರಧಾನಿ ಮೋದಿಗೆ ಟ್ವೀಟ್ ಮಾಡಿದ್ರು. ಈ ಕುರಿತು ಈಟಿವಿ ಭಾರತ್ ಜೊತೆ ಮಾತಾನಾಡಿದ ಬಿದರಿ, ಈ ಘಟನೆ ನಡೆಯಬಾರದಿತ್ತು, ಆದರೆ ನಡೆದು ಹೋಗಿದೆ. ಇದಕ್ಕೆಲ್ಲ ತಕ್ಕ ಶಾಸ್ತಿಯಾಗಬೇಕು. ರಾಜಕೀಯ ಕಚ್ಚಾಟ ಈಗ ಮುಖ್ಯವಲ್ಲ ಎಂದಿದ್ದಾರೆ