ನಕಲಿ ರೈತ ಹೋರಾಟಗಾರರಿಗೆ ಕಠಿಣ ಶಿಕ್ಷೆ ನೀಡಬೇಕು: ಕಾಶೀಬಾಯಿ ರಾಂಪೂರ - ಮುದ್ದೇಬಿಹಾಳ್ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
🎬 Watch Now: Feature Video
ಮುದ್ದೇಬಿಹಾಳ: ದೇಶದ ಏಕತೆ, ಭಾವೈಕ್ಯತೆಯನ್ನು ಅಸ್ತಿರಗೊಳಿಸಲು ಯತ್ನಿಸುತ್ತಿರುವವರ ವಿರುದ್ಧ ಕೇಂದ್ರ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಕೆಂಪುಕೋಟೆಯಲ್ಲಿ ನಡೆದಿರುವ ಕುಕೃತ್ಯದ ಹಿಂದಿರುವ ದೇಶದ್ರೋಹಿಗಳನ್ನು ಬಂಧಿಸಿ ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಕಾಶೀಬಾಯಿ ರಾಂಪೂರ ಆಗ್ರಹಿಸಿದರು. ಪಟ್ಟಣದ ತಹಶೀಲ್ದಾರ್ ಕಛೇರಿ ಎದುರು ಗುರುವಾರ ಬಿಜೆಪಿ ಮಂಡಲ ಹಾಗೂ ರೈತ ಮೋರ್ಚಾದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ರ‍್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು. ದೇಶದ ಮಾನ ಹರಾಜು ಹಾಕಿರುವ ಕೆಲವು ರಾಜಕೀಯ ಪಕ್ಷಗಳ ಮುಖಂಡರನ್ನು ಬಂಧಿಸಿ ದೇಶದ್ರೋಹದ ಪ್ರಕರಣ ದಾಖಲಿಸಿಬೇಕು.ಜೊತೆಗೆ ನಕಲಿ ರೈತ ಹೋರಾಟಗಾರರಿಗೆ ಕಠಿಣ ಶಿಕ್ಷೆ ನೀಡಲಿ ಎಂದು ಒತ್ತಾಯಿಸಿದರು.
TAGGED:
delhi farmers Riot