ಕಾಸ್ಟಿಕ್ ಸೋಡಾ ತಯಾರಿಕಾ ಕಂಪನಿಯಿಂದ ತ್ಯಾಜ್ಯ ನೀರು ಸೋರಿಕೆ: ಸ್ಥಳೀಯರ ಆಕ್ರೋಶ - ಕಾಸ್ಟಿಕ್ ಸೋಡಾ ತಯಾರಿಕಾ ಕಂಪನಿ ತ್ಯಾಜ್ಯ ಸೋರಿಕೆ
🎬 Watch Now: Feature Video

ಕರಾವಳಿ ನಗರಿ ಕಾರವಾರದ ಬಿಣಗಾ ಗ್ರಾಮದಲ್ಲಿರುವ ಕಾಸ್ಟಿಕ್ ಸೋಡಾ ಕಾರ್ಖಾನೆಯಿಂದ ತ್ಯಾಜ್ಯದ ನೀರು ಹೊರಬಿಡುವ ವಿಚಾರ ಹಿಂದಿನಿಂದಲೂ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಆದರೂ ಕಾರ್ಖಾನೆಯ ತ್ಯಾಜ್ಯವನ್ನ ಜನವಸತಿ ಪ್ರದೇಶದ ಸಮೀಪದಿಂದಲೇ ಸಮುದ್ರಕ್ಕೆ ಪೈಪ್‌ಲೈನ್ ಮೂಲಕ ಬಿಡುತ್ತಿದೆ ಎನ್ನಲಾಗುತ್ತಿದೆ. ಆದ್ರೆ ಇಂದು ಆ ತ್ಯಾಜ್ಯ ನೀರಿನ ಪೈಪ್‌ಲೈನ್ ಹೆದ್ದಾರಿ ಬಳಿ ಒಡೆದು ರಾಸಾಯನಿಕ ಮಿಶ್ರಿತ ನೀರು ರಸ್ತೆಯ ಮೇಲೆ ಹರಿದಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.