ಭಾರತ-ದ.ಆಫ್ರಿಕಾ ಟಿ20 ಪಂದ್ಯ.. ಸಚಿನ್ ಅಭಿಮಾನಿ ಜೊತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್! - ಭಾರತ - ದಕ್ಷಿಣ ಆಫ್ರಿಕಾ ಟಿ20 ಪಂದ್ಯ
🎬 Watch Now: Feature Video
ಬೆಂಗಳೂರು: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟಿ20 ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಭಾನುವಾರವಾದ್ದರಿಂದ ಸಿಲಿಕಾನ್ ಸಿಟಿಯ ಜನ ಕ್ರಿಕೆಟ್ ಪಂದ್ಯ ವೀಕ್ಷಣೆಯ ಮೂಲಕ ವೀಕೆಂಡ್ ಮಜಾ ಅನುಭವಿಸುತ್ತಿದ್ದಾರೆ. ಪಂದ್ಯ ನೋಡಲು ಎಂದಿನಂತೆ ತಮ್ಮ ವೇಷಭೂಷಣದೊಂದಿಗೆ ಬಂದಿದ್ದ ಸಚಿನ್ ತೆಂಡೂಲ್ಕರ್ ಅಭಿಮಾನಿ ಸುಧೀಂದ್ರ ಜೊತೆ ಫ್ಯಾನ್ಸ್ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಹಾಗೆಯೇ ಸ್ಟೇಡಿಯಂಗೆ ಸಿಎಂ ಬಿಎಸ್ವೈ ಆಗಮಿಸಿದ್ದರಿಂದ ಕೆಲಕಾಲ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.